ಹೋಬಳಿ ಮಟ್ಟದ ಬ್ರೈನೋಟ್ರಿಕ್ಸ್ ಅಬಾಕಸ್ ಪರೀಕ್ಷೆ
ಸುಂಟಿಕೊಪ್ಪ; ಇಲ್ಲಿನ ಬ್ರೈನೋಟ್ರಿಕ್ಸ್ ಅಬಾಕಸ್ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಪ್ರಥಮ ಹಂತದ ಹೋಬಳಿ ಮಟ್ಟದ ಬ್ರೈನೋಟ್ರಿಕ್ಸ್ ಅಬಾಕಸ್ ಪರೀಕ್ಷೆಯನ್ನು ಏರ್ಪಡಿಸಲಾಯಿತು.
ಮೊದಲ ಹಂತದ ಬ್ರೈನೋಟ್ರಿಕ್ಸ್ ಅಬಾಕಸ್ ಪರೀಕ್ಷೆಯ ಕಿರಿಯರ ವಿಭಾಗದಲ್ಲಿ ಅಫ್ಸಲ್ ಮಹಮದ್, ಜೇಷ್ಮ ಟಿ. ಜಾನ್ ಮತ್ತು ಎಂ.ಜೆ. ಆರ್ಯ, ಹಿರಿಯರ ವಿಭಾಗದಲ್ಲಿ ನೌಫಲ್, ಎಸ್.ಆರ್. ಚಿರಾಗ್ ಉನ್ನತ ಅಂಕಗಳನ್ನು ಪಡೆಯುವ ಮೂಲಕ ಪದಕಗಳನ್ನು ಪಡೆದುಕೊಂಡರು.
ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಹೀದ್ ಜಾನ್ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಪರೀಕ್ಷೆಯಲ್ಲಿ ಎ ಪ್ಲಸ್ ಶ್ರೇಣಿ ಪಡೆದಿದ್ದ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಚೈಸಿ ಕುಸುಮಾ, ಅಧ್ಯಾಪಕರಾದ ಜೈಸಿ ಜಾನ್ ಮತ್ತು ಪೋಷಕರು ಉಪಸ್ಥಿತರಿದ್ದರು.