ಇಲಿ ಜ್ವರ: ವ್ಯಕ್ತಿ ಸಾವು
ಸುಳ್ಯ: ಎಣ್ಮೂರು ಗ್ರಾಮದ ಸಾಮೆತ್ತಡ್ಕ ನಿವಾಸಿ ಇಂದ್ರಾಜೆ ರುಕ್ಮಯ್ಯ ಗೌಡ ಎಂಬವರ ಮಗ ವಾಸುದೇವ (35) ಇಲಿ ಜ್ವರದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಾಸುದೇವರಿಗೆ ಜ್ವರ ಕಾಣಿಸಿಕೊಂಡಾಗ ಸ್ಥಳೀಯ ಕ್ಲಿನಿಕ್ನಿಂದ ಔಷಧ ತರಲಾಯಿತಾದರೂ ಜ್ವರ ಮತ್ತಷ್ಟು ತೀವ್ರಗೊಂಡಿತ್ತು. ನಂತರ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಇಲಿ ಜ್ವರದ ಲಕ್ಷಣಗಳು ಕಂಡು ಬಂದಿದ್ದು, ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿದ ಅವರು ಮೃತಪಟ್ಟಿದ್ದಾರೆ.