ಕುಮಾರಧಾರಾದಲ್ಲಿ ಮುಳುಗಿ ವ್ಯಕ್ತಿ ಸಾವು
ಉಪ್ಪಿನಂಗಡಿ: ಕಡಬ ಠಾಣೆ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕೋರಿಯಾರ್ ಎಂಬಲ್ಲಿ ಕುಮಾರಧಾರ ನದಿ ದಾಟುತ್ತಿದ್ದ ವೇಳೆ ಬೈರ ಮುಗೇರ (55) ಎಂಬವರು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಯುವತಿ ನಾಪತ್ತೆ
ಸುಳ್ಯ: ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ರಮೇಶ ಎಂಬವರ ಪುತ್ರಿ ರೇವತಿ (17) ಎಂಬ ಯುವತಿ ನಾಪತ್ತೆಯಾಗಿರುವ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನ.14ರಂದು ರೇವತಿ ತನ್ನ ಸಂಬಂಧಿಕರಾದ ಚಿನ್ನಮ್ಮ ಎಂಬವರೊಂದಿಗೆ ಸುಳ್ಯಕ್ಕೆ ಬಂದಿದ್ದಾಳೆ. ಆದರೆ, ಚಿನ್ನಮ್ಮ ಅವರ ಮನೆಗೆ ಬಂದಿದ್ದು ರೇವತಿ ಮನೆಗೆ ಬಂದಿಲ್ಲ. ನಾವು ಸಂಬಂಧಿಕರಲ್ಲಿ, ಆಕೆಯ ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಆದ್ದರಿಂದ ರೇವತಿಯ ಮನೆಯವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.