ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದರೋಡೆ ಪ್ರಕರಣ: ಆರೋಪಿಗೆ ಜಾಮೀನು

Rashmi Kasaragodu
Updated On : 19 Nov 2013, 12:32 pm

ಪುತ್ತೂರು: ಕಾರು ತಡೆದು ಪ್ರಯಾಣಿಕರಿಗೆ ಹಲ್ಲೆ ನಡೆಸಿ ನಗ, ನಗದು ದರೋಡೆ ಮಾಡಿದ ಆರೋಪಿಗೆ ಸೋಮವಾರ ನ್ಯಾಯಾಲಯ ಜಾಮೀನು ನೀಡಿದೆ. ಬೆಂಗಳೂರು ನಿವಾಸಿ ಶ್ರೀನಿವಾಸ ಅಲಿಯಾಸ್ ಶೀನ ಜಾಮೀನು ಪಡೆದ ಆರೋಪಿ. ಬೆಂಗಳೂರಿನ ನಾಗರಾಜ್ ಮತ್ತು ಕುಸುಮ ದಂಪತಿ ಸಾಗುತ್ತಿದ್ದ ಕಾರನ್ನು ಕಳೆದ ಜ.27ರಂದು ಸುಳ್ಯ ಸಮೀಪದ ಕಲ್ಲುಗುಂಡಿ ಎಂಬಲ್ಲಿ ಮತ್ತೊಂದು ಕಾರಲ್ಲಿ ಹಿಂಬಾಲಿಸಿದ ಶೀನ ಮತ್ತು ಇನ್ನಿಬ್ಬರು ಆರೋಪಿಗಳ ತಂಡ ಅಡ್ಡಗಟ್ಟಿ, ದಂಪತಿ ಮೇಲೆ ಹಲ್ಲೆ ನಡೆಸಿ ಅವರ ಬಳಿಯಲ್ಲಿದ್ದ 55 ಗ್ರಾಂ ಚಿನ್ನಾಭರಣ, ರು. 4500 ನಗದು, ಪಾನ್ಕಾರ್ಡ್ ಮತ್ತು ಎಟಿಎಂ ಕಾರ್ಡ್ ಕಸಿದು ಪರಾರಿಯಾಗಿದ್ದರು. ತನಿಖೆ ನಡೆಸಿದ ಸುಳ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಶ್ರೀನಿವಾಸ ಯಾನೆ ಶೀನನನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ವಾಹನ ಪಲ್ಟಿ; ಏಳು ಮಂದಿಗೆ ಗಾಯ
ಉಪ್ಪಿನಂಗಡಿ: ಬೆಂಗಳೂರು ಸಮೀಪದ ಪಾವಗಡದಿಂದ ಯಾತ್ರಾರ್ಥಿಗಳನ್ನು ಕರೆ ತರುತ್ತಿದ್ದ ತೂಫಾನ್ ವಾಹನ ಕೊಕ್ಕಡ ಸಮೀಪದ ಪಾರ್ಪಿಕಲ್ಲು ಒಂಟಿಯಾನ ಬಳಿ ಚಾಲಕನ ಹತೋಟಿ ತಪ್ಪಿ ಮಗುಚಿ ಬಿದ್ದು 7 ಮಂದಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.  ಪಾವಗಡದ ಕುಟುಂಬವೊಂದರ ಸದಸ್ಯರು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿದ್ದು, ರಾತ್ರಿ 10 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.  ವಾಹನದಲ್ಲಿದ್ದ ಪಾವಗಡದ ಲಕ್ಷ್ಮೀದೇವಿ, ಚಾಲಕ ರಘು, ಆದಮ್ಮ, ನವ್ಯ, ಸುನಿಲ್, ಶ್ರೀನಿವಾಸ, ತ್ರಿವೇಣಿ ಎಂಬವರಿಗೆ ಗಾಯಗಳಾಗಿದ್ದು ಅವರನ್ನು ಮಂಗಳೂರು ಹಾಗೂ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement