ನಾಳೆ ಸಹಕಾರಿ ಸಪ್ತಾಹ ಸಮಾರೋಪ
ಬೆಳ್ತಂಗಡಿ: ಮುಂಡಾಜೆ ಸಹಕಾರಿ ವ್ಯವಸಾಯ ಸಂಘ ನ.14 ರಿಂದ 60ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಿಸುತ್ತಿದ್ದು ಬುಧವಾರ ಮುಂಡಾಜೆ ಸೋಮಂತಡ್ಕ ಶಾಖಾ ವಠಾರದಲ್ಲಿ ಸಮಾಪನಗೊಳ್ಳಲಿದೆ.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ. ವಸಂತ ಬಂಗೇರ ವಹಿಸಲಿದ್ದಾರೆ. ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಮಹಾ ಮಂಡಲ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಸಮಾರೋಪ ಭಾಷಣ ಮಾಡುವರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ದ.ಕ. ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ಮುಂಡಾಜೆ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ಉಮೇಶ್, ಮುಂಡಾಜೆ ಮೃತ್ಯುಂಜಯ ರೈತ ಸೇವಾಕೂಟ ಅಧ್ಯಕ್ಷ ಎಂ.ಗೋಪಾಲಕೃಷ್ಣ ಜೋಶಿ, ಕೊಕ್ಕೊ ಬೆಳೆಗಾರರ ಸಂಘದ ಅಧ್ಯಕ್ಷ ಗಜಾನನ ವಝೆ ಪಾಲ್ಗೊಳ್ಳುವರು.
ಹಿರಿಯ ಸಂಘದ ಸದಸ್ಯ ಕೆ. ನಾಗಪ್ಪ ರೈ ಮತ್ತು ಆಯಾ ಕ್ಷೇತ್ರಗಳ ಸಾಧಕರಾದ ಮುಂಡಾಜೆಯ ಕೃಷ್ಣಾ ಜಿ.ಪಡ್ಕೆ, ಕಲ್ಮಂಜದ ಮೋನಪ್ಪ ಗೌಡ ಬಟ್ಟಾಜೆ, ಚಿಬಿದ್ರೆಯ ಸಿ.ಜೆ. ಕುರಿಯನ್, ಚಾರ್ಮಾಡಿಯ ಯು. ಹಸನಬ್ಬ, ತೋಟತ್ತಾಡಿಯ ಗಂಗಯ್ಯ ಸಾಲಿಯಾನ್, ನೆರಿಯಾದ ಆಂಟನಿ ಕೆ. ಇವರನ್ನು ಸಮ್ಮಾನಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎನ್.ಎಸ್.ಗೋಖಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.