ಮದುವೆಗೆ ನಮ್ಮ ಅಭ್ಯಂತರ ಇಲ್ಲ'
ಸುಬ್ರಹ್ಮಣ್ಯ: 'ನನ್ನ ಮಗ ನಿತೀನ್ ಮತ್ತು ಧನ್ಯಾ ಇಬ್ಬರೂ ಪ್ರಬುದ್ಧರು. ಅವರ ತೀರ್ಮಾನವೇ ಅಂತಿಮ. ಅವರಿಬ್ಬರು ಒಪ್ಪಿಗೆ ಇದ್ದು ಮದುವೆಯಾಗುವುದಾದರೆ ನಮ್ಮಿಂದ ಯಾವುದೇ ಅಭ್ಯಂತರ ಇಲ್ಲ' ಎಂದು ನಿತೀನ್ ತಂದೆ ತುಕರಾಮ್ ಏನೆಕಲ್ ತಿಳಿಸಿದ್ದಾರೆ.
ಏನೆಕಲ್ನ ಪ್ರಿಯಕರ ನಿತೀನ್ ಮನೆ ಎದುರು ಯುವತಿ ಧರಣಿ ಕೂತ ಪ್ರಕರಣಕ್ಕೆ ಸಂಬಂಧಿಸಿ ಯುವಕನ ತಂದೆ ಈ ಸ್ಪಷ್ಟನೆ ನೀಡಿದ್ದಾರೆ. ತಾನು ಮತ್ತು ನಿತೀನ್ ಧರ್ಮಸ್ಥಳದಲ್ಲಿ ಮದುವೆಯಾಗಿದ್ದೇವೆಂದು ಧನ್ಯಾ ಹೇಳಿದ ಪ್ರಕಾರ ಮದುವೆಯಾಗಿರುವುದೇ ಆದರೆ ಅಡ್ಡಿಪಡಿಸುವುದಾದರೂ ಯಾರಿಗೆ ಎಂದು ತುಕಾರಾಮ್ ಏನೆಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.