ಹುಲಿ ಚರ್ಮ ಮಾರಾಟ ಆರೋಪಿಗಳ ಖುಲಾಸೆ
ಸುಳ್ಯ: ಹುಲಿ ಮತ್ತು ಚಿರತೆ ಚರ್ಮ ಮಾರಾಟ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪಿತ್ತಿದೆ. 2007 ಮಾ.11ರಂದು ಮಂಗಳೂರು ನಗರದ ಹಳೆ ಬಸ್ ನಿಲ್ದಾಣ ಬಳಿಯಲ್ಲಿ ನಿಂತಿದ್ದ ಟಾಟಾ ಇಂಡಿಕಾ ಕಾರಿನಲ್ಲಿ ಸುಮಾರು ರು. 4 ಲಕ್ಷ ಮೌಲ್ಯದ ಹುಲಿ ಮತ್ತು ಚಿರತೆ ಚರ್ಮದ ಮಾರಾಟದ ದಂಧೆ ನಡೆಯುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ ಮಂಗಳೂರಿನ ರೌಡಿ ನಿಗ್ರಹದಳದ ಸಬ್ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಹುಲಿ, ಚಿರತೆ ಚರ್ಮ ವಶಪಡಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸು ದಾಖಲಿಸಿದ್ದರು. ನ್ಯಾಯಾಲಯ ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪಿತ್ತಿದೆ. ಆರೋಪಿಗಳಾದ ಸುಳ್ಯ ತಾಲೂಕಿನ ಕಲ್ಮಡ್ಕ ನಿವಾಸಿ ಕೇಶವ, ನೀರಬಿದಿರೆ ನಿವಾಸಿ ಕುಶ ಯಾನೆ ಕುಶಲ, ಗುತ್ತಿಗಾರಿನ ನಿವಾಸಿ ಪ್ರಕಾಶ ಇವರ ಪರವಾಗಿ ನ್ಯಾಯವಾದಿಗಳಾದ ಟಿ.ನಾರಾಯಣ ಪೂಜಾರಿ ಮತ್ತು ಕಲ್ಲುಗುಂಡಿಯ ನಿವಾಸಿ ಚಿದಾನಂದರ ಪರವಾಗಿ ನ್ಯಾಯವಾದಿ ನವೀನ್ ಚಿಲ್ಪಾರ್ ವಾದಿಸಿದ್ದರು.