ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಸವ ವಸತಿ ಮನೆ ಪೂರ್ಣಗೊಂಡವರಿಗೆ ಹಣ ಪಾವತಿಗೆ ಅನಿಲ್ ರೈ ಆಗ್ರಹ

Mainashree
Updated On : 20 Nov 2013, 12:18 pm

ಸುಳ್ಯ: ಹಳೆ ಮನೆಯನ್ನು ಮುರಿದು ಸಾಲ ಮಾಡಿ ಬಸವ ವಸತಿ ಯೋಜನೆಯಡಿ ಮನೆ ಪೂರ್ಣಗೊಳಿಸಿದವರಿಗೆ ತಕ್ಷಣ ಹಣ ಪಾವತಿಸುವಂತೆ ತಾ.ಪಂ. ಸದಸ್ಯ ಅನಿಲ್ ರೈ ಆಗ್ರಹಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಅಮರ ಮೂಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿ ನಡೆದ ತಾಲೂಕು ಮಟ್ಟದ ಗಾ.ಪಂ.ಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಸುಳ್ಯ ತಾಲೂಕಿನಲ್ಲಿ ಸುಮಾರು 600ಕ್ಕೂ ಹೆಚ್ಚು ಇಂತಹ ಮನೆಗಳಿದ್ದು, ಇದರಲ್ಲಿ ಪರಿಶಿಷ್ಟ ಜಾತಿ- ಪಂಗಡದವರೂ ಸೇರಿದ್ದಾರೆ. ಸಿಮೆಂಟ್ ಸಾಲ ನೀಡಿದ ಅಂಗಡಿಯವರು ಈಗ ಹಣ ಪಾವತಿಗೆ ಒತ್ತಡ ತರುತ್ತಿದ್ದು, ಫಲಾನುಭವಿಗಳು ಅಸಹಾಯಕರಾಗಿದ್ದಾರೆ ಎಂದು ಹೇಳಿದರು.
2011- 12ರಲ್ಲಿ ಕಾಮಗಾರಿ ಮುಗಿದ ಮನೆಗೂ ಬಿಲ್ ಬಾಕಿ ಇದೆ. 2012- 13ರ ಜಿಪಿಎಸ್ ಮಾಡಲು ವಿಳಂಬ ಮಾಡಿದ್ದರಿಂದ ಬಿಲ್ ಬಂದಿಲ್ಲ. 2013- 14ರ ಸಾಲಿನಲ್ಲಿ ಆದೇಶ ಪತ್ರವೇ ಬಂದಿಲ್ಲ ಎಂದು ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಹೇಳಿದರು.
ಮನೆ ಪೂರ್ಣಗೊಳಿಸಿದವರಿಗೆ ಹಣ ನೀಡಲು ತಡೆ ಮಾಡುವುದು ಸರಿಯಲ್ಲ. ಹೆದ್ದಾರಿ ಬದಿಗೆ ಪ್ರವಾಸಿಗಳು ಹಚ್ಚು ಕಸ ಹಾಕುತ್ತಾರೆ. ಹಾಗಾಗಿ ಅಂತಹ ಪಂಚಾಯಿತಿಗಳಿಗೆ ಸ್ವಚ್ಛತೆಗೆ ಹಚ್ಚಿನ ಅನುದಾನ ನೀಡಬೇಕು ಎಂದರು ಆಗ್ರಹಿಸಿದರು.
ಸ್ವಚ್ಛತೆಗೆ ಕಾನೂನು ಜಾರಿ ಅಗತ್ಯ. ಕಾನೂನು ಪಾಲನೆ ಮಾಡದಿದ್ದಲ್ಲಿ ದಂಡ ವಿಧಿಸಬೇಕು. ಸುಬ್ರಹ್ಮಣ್ಯದಲ್ಲಿ ಹೀಗೆ ಮಾಡಿ ಯಶಸ್ವಿಯಾಗಿದ್ದೇವೆ ಎಂದು ಸುಬ್ರಹ್ಮಣ್ಯದ ಶಿವರಾಮ ರೈ ಹೇಳಿದರು.
ಸಿಇಒ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಂತೋಷ್ ಜಾಕೆ ಸಲಹೆ ನೀಡಿದರು.
ಶೌಚಾಲಯವಿಲ್ಲದ ಮನೆಯ ಪಡಿತರವನ್ನು ಕನಿಷ್ಠ ಎರಡು ತಿಂಗಳು ಸ್ಥಗಿತಗೊಳಿಸಬೇಕು. ಆಗ ಅವರೇ ಶೌಚಾಲಯ ನಿರ್ಮಿಸಲು ಮುಂದೆ ಬರುತ್ತಾರೆ ಎಂದು ಕೃಷ್ಣಯ್ಯ ಮೂಲೆತೋಟ ಸಲಹೆ ನೀಡಿದರು.
ತಾನು ತುಮಕೂರಿನಲ್ಲಿದ್ದಾಗ ಹಾಗೆ ಮಾಡಿದ್ದೇನೆ. ಆದರೆ, ಅದು ದ.ಕ. ಜಿಲ್ಲೆಯಲ್ಲಿ ಸಾಧ್ಯವಿಲ್ಲ. ಉದ್ಯೋಗ ಖಾತರಿ ಯೋಜನೆ ಯಶಸ್ವಿಯಾಗಬೇಕಾದರೆ ಅದು ಪಿಡಿಒಗಳನ್ನು ಅವಲಂಬಿಸಿದೆ. ಅವರು ಸರಿಯಾಗಿ ಕೆಲಸ ಮಾಡಿದರೆ ಯಶಸ್ಸು, ಇಲ್ಲದಿದ್ದರೆ ಇಲ್ಲ ಎಂದು ತುಳಸಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಮರ ಮೂಡ್ನೂರು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ, ಪಂಚಾಯಿತಿ ಅಧ್ಯಕ್ಷರೊಂದಿಗೆ ಚರ್ಚಿದ ಬಳಿಕ ನರೇಗಾ ಯೋಜನೆಯನ್ನು ಅನುಷ್ಠಾನ ಮಾಡಿ. ವ್ಯವಸ್ಥೆಯಲ್ಲಿ ಹೊಂದಾಣಿಕ ಮುಖ್ಯ. ವಸತಿ ಯೋಜನೆಯಲ್ಲಿ ರದ್ದಾದ ಮನೆಗಳಿಗೆ ಯಾರು ಉತ್ತರ ಕೊಡುತ್ತಾರೆ. ನಿಗಮಕ್ಕೆ ಫೋನ್ ಮಾಡಿದರೆ ಯಾರೂ ಸ್ವೀಕರಿಸುತ್ತಿಲ್ಲ. ಸಿಇಒ ಮುಂದೆ ನಿಂತು ಸಮಸ್ಯೆಯನ್ನು ಪರಿಹರಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement