ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೆರ್ಮುದೆಯಲ್ಲಿ ಸಿಕ್ಕಿಬಿದ್ದ ಆಡು ಕಳ್ಳ!

Lingaraj Badiger
Updated On : 21 Nov 2013, 12:19 pm

ಮಂಗಳೂರು: ಪೆರ್ಮುದೆಯಲ್ಲಿ ಮೂರು ಬಾರಿ ಆಡು ಕದ್ದು ಪರಾರಿಯಾಗಿದ್ದ ಚಾಣಕ್ಷ ಕಳ್ಳ ನಾಲ್ಕನೇ ಬಾರಿ ಕದಿಯುವಾಗ ಸಿಕ್ಕಿ ಬಿದ್ದಿದ್ದಾನೆ. ಜನರ ಕೈಗೆ ಸಿಕ್ಕಿ ಬಿದ್ದ ಆಡುಕಳ್ಳನಿಗೆ ಮುಖ ಮೂತಿ ನೋಡದೆ ಜನರು ಹೊಡೆದು ಮರಕ್ಕೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.  ಕಾಟಿಪಳ್ಳದ ಸಾಕಿಬ್ ಏಟು ತಿಂದವ. ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು. ನ್ಯಾಯಾಂಗಬಂಧನ ವಿಧಿಸಲಾಗಿದೆ.
 ಪೆರ್ಮುದೆ ಇಬ್ರಾಹಿಂ ಎಂಬವರ ಮನೆಗೆ ನುಗ್ಗಿ ಈತ ಮೂರು ಬಾರಿ ಆಡು ಕಳವು ಮಾಡಿದ್ದ. ಎರಡು ಬಾರಿ ಮನೆಯವರು ಬೆನ್ನಟ್ಟಿದ್ದರು ಆದರೆ ಆತ ಬೈಕ್‌ನಲ್ಲಿ ಪರಾರಿಯಾಗಿದ್ದ. ಆಡು ಕಳವಿನಿಂದ ಕಂಗೆಟ್ಟಿದ್ದ ಮನೆಯವರು ಮುಂದಿನ ಬಾರಿ ಕಳ್ಳನನ್ನು ಹಿಡಿಯಲೇ ಬೇಕು ಎಂದು ಸಿದ್ಧರಾಗಿ ಪಿಕಪ್ ಜೀಪ್ ತಂದಿದ್ದರು.
 ಬುಧವಾರ ಬೆಳಗ್ಗೆ 5 ಗಂಟೆಗೆ ಆಡು ಕದಿಯುತ್ತಿದ್ದ ವೇಳೆ ಮನೆಯವರಿಗೆ ಎಚ್ಚರವಾಗಿತ್ತು. ಈತ ಬೈಕ್‌ನಲ್ಲಿ ಪರಾರಿಯಾದಾಗ ಜೀಪ್‌ನಲ್ಲಿ ಬೆನ್ನಟ್ಟಿ ಹಿಡಿದು ಥಳಿಸಿದ್ದಾರೆ. ಮರಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಶೇಷ ವಿತ್ತವಲಯ ಪರಿಸರದಲ್ಲಿ ಕೆಲಸ ಮಾಡುವ ಉತ್ತರಭಾರತದ ಕಾರ್ಮಿಕರ ಮೊಬೈಲ್‌ಗಳನ್ನು ಕಳವು ಮಾಡಿದ ಬಗ್ಗೆ ದೂರುಗಳಿವೆ. ಈತನ ಬಂಧನವಾದ ತಕ್ಷಣ ಕಾರ್ಮಿಕರು ಸುರತ್ಕಲ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡತೊಡಗಿದ್ದಾರೆ.
 ಈತ ಪೆರ್ಮುದೆಯಲ್ಲಿ ಆಡು ಕಳವು ಮಾಡುವ ವೇಳೆ ಬಳಸಿದ ಬೈಕ್ ಕೂಡಾ ಕಳವಾಗಿರುವುದು. ಇತ್ತೀಚೆಗೆ ಬಂಟ್ಸ್ ಹಾಸ್ಟೆಲ್‌ನಲ್ಲಿ ಕಳವಾದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು. ಈತನ ವಿರುದ್ಧ ಮಣಿಪಾಲದಲ್ಲಿಯೂ ಕಳವು ಮಾಡಿದ ದೂರುಗಳಿವೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement