ಪ್ರತಿ ಗ್ರಾಮ ಪಂಚಾಯ್ತಿಗೆ ರು. 25 ಲಕ್ಷ ಅನುದಾನ ನೀಡಲು ಆಗ್ರಹ
ಸುಳ್ಯ: ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ಕನಿಷ್ಠ ರು. 25 ಲಕ್ಷ ಅಭಿವೃದ್ಧಿ ಅನುದಾನವನ್ನು ಒದಗಿಸಬೇಕು ಎಂದು ಸುಳ್ಯ ತಾಲೂಕು ಗ್ರಾ.ಪಂ. ಪ್ರತಿನಿಧಿಗಳ ಒಕ್ಕೂಟ ಆಗ್ರಹಿಸಿದೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸಂತೋಷ್ ಜಾಕೆ, ಜಿಲ್ಲಾ ಉಪಾಧ್ಯಕ್ಷ ಜಿ.ಕೆ. ಹಮೀದ್, ಈಗ ರು. 8 ಲಕ್ಷ ಅನುದಾನ ಮಾತ್ರ ಬರುತ್ತಿದ್ದು, ಅದರಲ್ಲಿ ಅರ್ಧಪಾಲು ಕರೆಂಟ್ ಬಿಲ್ಗೆ ಹೋಗುತ್ತದೆ. ಹೀಗಾಗಿ ಗರಿಷ್ಠ ಅನುದಾನಕ್ಕೆ ಒತ್ತಾಯಿಸಿ ಹಾಗೂ ಗ್ರಾ.ಪಂ. ಸದಸ್ಯರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಮುಂದಿರಿಸುವ ಸಲುವಾಗಿ ಗ್ರಾ.ಪಂ. ಸದಸ್ಯರ ಜಿಲ್ಲಾ ಸಮಾವೇಶವು 23ರಂದು ಬಿ.ಸಿ. ರೋಡ್ನಲ್ಲಿ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಪ್ರತಿನಿಧಿ ಮಹಮ್ಮದ್ ಇಕ್ಬಾಲ್ ಎಲಿಮಲೆ, ತಾಲೂಕು ಕೋಶಾಧಿಕಾರಿ ಜಯಪ್ರಕಾಶ್ ನೆಕ್ರೆಪ್ಪಾಡಿ, ಜಿಲ್ಲಾ ಪ್ರತಿನಿಧಿ ಅಶೋಕ್ ಜಾಲ್ಸೂರು ಇದ್ದರು.