ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಾಜ್ಯಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ

Lingaraj Badiger
Updated On : 21 Nov 2013, 12:18 pm

ಮಂಗಳೂರು: 2013-14ನೇ ಸಾಲಿನ ರಾಜ್ಯ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟವು ನ. 22 ರಿಂದ 24 ರ ವರೆಗೆ ಶಿವಮೊಗ್ಗ ಜಿಲ್ಲೆಯ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಕ್ರೀಡಾಕೂಟಕ್ಕೆ ಸೆ. 12 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಗುಂಪು ಸ್ಪರ್ಧೆಯಲ್ಲಿ
ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಮಾತ್ರ ಭಾಗವಹಿಸಬಹುದು.
ಆದ್ದರಿಂದ ಜಿಲ್ಲಾ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದ ಅಥ್ಲೆಟಿಕ್ಸ್, ವಾಲಿಬಾಲ್, ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ದ.ಕ. ಜಿಲ್ಲೆಯ ಕ್ರೀಡಾಪಟುಗಳು ನ.22 ರಂದು ಬೆಳಗ್ಗೆ 10.00 ಗಂಟೆಯೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಕ್ರೀಡಾಂಗಣ, ಶಿವಮೊಗ್ಗ ಇವರಲ್ಲಿ ತಿಳಿಸಬಹುದು.
--
ಘಟಿಕೋತ್ಸವ ಪದವಿಗೆ ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 32ನೇ ವಾರ್ಷಿಕ ಘಟಿಕೋತ್ಸವು 2014 ನೇ ಫೆಬ್ರವರಿಯಲ್ಲಿ ನಡೆಯಲಿದ್ದು, ಎಲ್ಲ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪದವಿ ಹಾಗೂ ಪದವಿಮಟ್ಟದಲ್ಲಿ ಎಲ್ಲ ವಿಷಯಗಳಲ್ಲಿ ಪ್ರಥಮ ದರ್ಜೆ ತೇರ್ಗಡೆಗೊಂಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಈ ಹಿಂದೆ ಕಲಿತ ಕಾಲೇಜುಗಳ ಪ್ರಾಂಶುಪಾಲರಿಂದ, ವಿಭಾಗಗಳ ಅಧ್ಯಕ್ಷರಿಂದ ಅರ್ಜಿ ಪಡೆದು ಹಾಜರಿ ಪದವಿ ಪಡೆಯಬಹುದು. ಸ್ವಾಯತ್ತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು ಅರ್ಜಿಯನ್ನು ಸಂಬಂಧಪಟ್ಟ ಕಾಲೇಜುಗಳ ಮೂಲಕ ಸಲ್ಲಿಸಬಹುದು. ಪದವಿ ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪದವಿ ಮಟ್ಟದಲ್ಲಿ ರು. 460, ಸ್ನಾತಕೋತ್ತರ ಪದವಿ- ರು. 630, ಪಿಎಚ್‌ಡಿ/ಎಂಫಿಲ್-  ರು. 1,580, ಡಿಎಸ್ಸಿ/ಡಿಲಿಟ್-  ರು. 1,900 ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಪದವಿ ಮಟ್ಟದಲ್ಲಿ ರು. 280, ಸ್ನಾತಕೋತ್ತರ ಪದವಿ-  ರು. 365, ಪಿಎಚ್‌ಡಿ/ಎಂಫಿಲ್-  ರು. 840, ಡಿಎಸ್ಸಿ/ಡಿಎಸ್ಸಿ-  ರು. 1,000 ಶುಲ್ಕ ನೀಡಬೇಕಾಗುತ್ತದೆ. ಅರ್ಜಿಗಳನ್ನು ನಿಗದಿತ ಶುಲ್ಕದೊಂದಿಗೆ ಡಿ. 31 ರೊಳಗೆ ಕುಲಸಚಿವರು(ಪರೀಕ್ಷಾಂಗ) ಮಂಗಳೂರು ವಿಶ್ವ ವಿದ್ಯಾನಿಲಯ, ಮಂಗಳಗಂಗೋತ್ರಿ- 574199 ಇಲ್ಲಿಗೆ ಸಲ್ಲಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement