ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಟ್ಲದಲ್ಲಿ 'ತುಳುವೆರೆ ಅಟಿಲ್‌ದ ಮಿನದನ'

Lingaraj Badiger
Updated On : 21 Nov 2013, 12:18 pm

ವಿಟ್ಲ: ಹಿಂದೆ ಇದ್ದ ಆಚಾರ ವಿಚಾರಗಳು ಇಂದು ನಶಿಸಿ ಹೋಗಿವೆ. ಅಂದಿನವರ ದಿನಚರಿ, ಆಹಾರ ಎಲ್ಲದರಲ್ಲೂ ಶಿಸ್ತು ಇತ್ತು. ಅವರು ಬಳಸುತ್ತಿದ್ದ ಆಹಾರ ಪದ್ಧತಿಯಲ್ಲಿ ಔಷಧೀಯ ಗುಣವಿದ್ದುದರಿಂದ ದೀರ್ಘಕಾಲ ಆರೋಗ್ಯದಿಂದಿರುತ್ತಿದ್ದರು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಹೇಳಿದ್ದಾರೆ.
ಬುಧವಾರ ಇಲ್ಲಿನ ವಿಠಲ ಪದವಿಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ವಿಜಯ ರಜತ ಸಂಭ್ರಮದ ನೆನಪಿವಾಗಿ ನಡೆಯುತ್ತಿರುವ 'ತುಳುನಾಡ್ದ ಜಾತ್ರೆ ಬಲೇ ತೇರ್ ಒಯಿಪುಗ' ಅಂಗವಾಗಿ ನಡೆದ ತುಳುವೆರೆ ಅಟಿಲ್‌ದ ಮಿನದನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ತುಳುನಾಡ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂದು ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು. ಪಾಕಶಾಸ್ತ್ರಜ್ಞೆ, ಲೇಖಕಿ, ಕವಯತ್ರಿ ಸವಿತಾ ಎಸ್. ಭಟ್ ಅಡ್ವಾಯಿ 'ತುಳುವೆರೆ ವನಸ್ ತೆನಸ್‌' ಬಗ್ಗೆ, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ವಿಜಯ ಶೆಟ್ಟಿ ಸಾಲೆತ್ತೂರು 'ತುಳುವ ಪೊಂಜೋವುಲೆ ಕಟ್ಟುಕಟ್ಟಳೆ' ಬಗ್ಗೆ ಮಾತನಾಡಿದರು.
ವಿಟ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಬಂಟ್ವಾಳ ತಾಲೂಕು ತುಳು ತೇರ್ ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ಕಾರ್ಯಾಧ್ಯಕ್ಷ ಕೈಯ್ಯೂರು ನಾರಾಯಣ ಭಟ್, ಬಂಟ್ವಾಳ ಮಹಿಳಾ ಸಮಿತಿ ಅಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಉಪಾಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಮಮತಾ ಡಿ.ಎಸ್.ಗಟ್ಟಿ, ಐಡಾ ಸುರೇಶ್, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ. ತಾರಾನಾಥ ಕೊಟ್ಟಾರಿ, ಜತೆ ಕಾರ್ಯದರ್ಶಿ ಪಿ.ಲಿಂಗಪ್ಪ ಗೌಡ, ಮೇಲ್ವಿಚಾರಕ ಸದಾಶಿವ ಅಳಿಕೆ ಇದ್ದರು.
ರೇಣುಕಾ ಎಸ್.ರೈ ಆಶಯ ಗೀತೆ ಹಾಡಿದರು. ಉಪಾಧ್ಯಕ್ಷೆ ಧರ್ಮಾವತಿ ಪಿ.ಬಿ.ಗೌಡ ಸ್ವಾಗತಿಸಿದರು. ಉಪಾಧ್ಯಕ್ಷೆ ಸುನೀತಾ ಪದ್ಮನಾಭ ವಂದಿಸಿದರು. ಲಕ್ಷ್ಮೀ ಕೆ.ಭಟ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement