ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸ್ಕೂಟರ್ ಡಿಕ್ಕಿ: ವ್ಯಕ್ತಿಗೆ ಗಾಯ

Lingaraj Badiger
Updated On : 21 Nov 2013, 12:19 pm

ಹಿರಿಯಡ್ಕ: ಆತ್ರಾಡಿ ಪೇಟೆ ಸಮೀಪ ಇರುವ ಪರೀಕ ಮಹಾಲಿಂಗೇಶ್ವರ ದೇವಸ್ಥಾನ ಗೋಪುರ ಬಳಿ ಸ್ಕೂಟರ್ ಡಿಕ್ಕಿಯಾಗಿ ಪಾದಚಾರಿ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಗಾಯಗೊಂಡವರು ನಾರಾಯಣ ಕಾಂಚನ್ ಎಂದು ಗುರುತಿಸಲಾಗಿದೆ. ನಂದಿತಾ ಎಂಬವರು ಸ್ಕೂಟರ್‌ನ್ನು ಅತಿವೇಗ, ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿರುವುದೇ ಅಪಘಾತಕ್ಕೆ ಕಾರಣ ಎಂದು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವ್ಯಕ್ತಿ ಮೇಲೆ ಹಲ್ಲೆ: ದೂರು
ಕಾರ್ಕಳ: ನಿಟ್ಟೆ ಗ್ರಾಮದ ದೂಪದಕಟ್ಟೆ ನಿವಾಸಿ ಹರೀಶ್ ಪೂಜಾರಿ ಎಂಬವರ ಮೇಲೆ ಇಬ್ಬರು ಹಲ್ಲೆ ನಡೆಸಿದ ಪ್ರಕರಣ ಮಂಗಳವಾರ ನಡೆದಿದೆ. ಆರೋಪಿ ವಿಲಿಯಂ ಹಾಗೂ ಇನ್ನೋರ್ವ ಹರೀಶ್ ಪೂಜಾರಿಗೆ ಆಯುಧದಿಂದ ಕಡಿದು ತಲೆ, ಮುಖ ಹಾಗೂ ಎಡಕೈಗೆ ತೀವ್ರವಾಗಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ವರ್ಷದ ಹಿಂದೆ ವಿಲಿಯಂ ಮೇಲೆ ಹರೀಶ್ ಪೂಜಾರಿ ಹಲ್ಲೆ ನಡೆಸಿದ್ದರು ಎನ್ನಲಾಗಿದ್ದು, ಈ ದ್ವೇಷದಿಂದ ವಿಲಿಯಂ ಹಲ್ಲೆ ನಡೆಸಿರಬೇಕು ಎಂಬುದಾಗಿ ಶಂಕಿಸಲಾಗಿದೆ. ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement