ಹೃದಯಾಘಾತ; ವ್ಯಕ್ತಿ ಸಾವು
ಬ್ರಹ್ಮಾವರ: ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಲ್ಲಿನ ಚೇರ್ಕಾಡಿ ಗ್ರಾಮದ ಆದರ್ಶ ನಗರದಲ್ಲಿ ಬುಧವಾರ ನಡೆದಿದೆ. ಮೃತರು ನರಸಿಂಹ ನಾಯ್ಕ (45). ಅವರಿಗೆ ಮನೆಯಲ್ಲಿ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂಬುದಾಗಿ ದೇವದಾಸ್ ನಾಯಕ್ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಗದು, ದಾಖಲೆ ಪತ್ರ ಕಳವು
ಮೂಲ್ಕಿ: ಕಿಲ್ಪಾಡಿ ಪಂಚಾಯಿತಿಯ ಅತಿಕಾರಿಬೆಟ್ಟು ಗ್ರಾಮದ ಮೈಲೊಟ್ಟುವಿನ ಪಾಂಡುರಂಗ ಕಾಮತ್ ಹೊಟೇಲ್‌ನ ಕಪಾಟಿನಲ್ಲಿದ್ದ 3,500 ನಗದು ಹಾಗೂ ದಾಖಲೆ ಪತ್ರಗಳನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೈಟೊಟ್ಟುವಿನಲ್ಲಿ ಪಾಂಡುರಂಗ ಕಾಮತ್ ಅವರ ಹೊಟೇಲ್ ಹಾಗೂ ಮನೆ ಒಂದೇ ಕಟ್ಟಡದಲ್ಲಿದ್ದು ಹೊಟೇಲ್ ಒಳಗಿನಿಂದ ಮನೆಯೊಳಗೆ ನುಗ್ಗಿರುವ ಕಳ್ಳರು ಕಪಾಟಿನಲ್ಲಿದ್ದ 3,500 ನಗದ ಹಾಗೂ ಕೆಲವು ದಾಖಲೆ ಪತ್ರಗಳನ್ನು ಕಳವು ಮಾಡಿದ್ದಾರೆ. ಪಾಂಡುರಂಗ ಕಾಮತ್ ಅವರು ಹಣ ತೆಗೆದುಕೊಳ್ಳಲು ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳೆದ ವಾರ ಹೊಟೇಲ್‌ನ ಟೇಬಲ್‌ನಲ್ಲಿಟ್ಟದ ಪಾಂಡುರಂಗ ಅವರ ಮೊಬೈಲ್ ಕೂಡ ಕಳವಾಗಿತ್ತು. ಈ ಸಂಬಂಧ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.