2.05 ಕೋಟಿ ಆರ್8 ಕಾರು ಬಿಡುಗಡೆ
ಮಂಗಳೂರು: ಜರ್ಮನಿಯ ಔಡಿ ಕಾರ್ನ ವಿಶ್ವದರ್ಜೆಯ ಶೋರೂಮ್ ಮಂಗಳೂರಲ್ಲಿ ಶುಕ್ರವಾರ ಆರಂಭಗೊಂಡಿದೆ.
ಇದೇ ಸಂದರ್ಭದಲ್ಲಿ 2.05 ಕೋಟಿ ಮೌಲ್ಯದ 'ಆರ್8' ಕಾರನ್ನು ಮಂಗಳೂರು ಮಾರುಕಟ್ಟೆಗೆ ಮಾರುಕಟ್ಟೆ ಮುಖ್ಯಸ್ಥ ನೀರಜ್ ಶ್ರೀವಾಸ್ತವ್ ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರಲ್ಲಿ ಮಾತ್ರ ಶೋರೂಮ್ ತೆರೆಯಲಾಗಿದ್ದು, ದೇಶದಲ್ಲಿ ಇದು 30ನೆಯದು. ಕಂಕನಾಡಿ ಮ್ಯಾಕ್ ಮಾಲ್ನಲ್ಲಿ 5,500 ಚದರಡಿ ವಿಸ್ತಾರದಲ್ಲಿ ಶೋರೂಮ್ ನಿರ್ಮಿಸಲಾಗಿದೆ. ಕೂಳೂರು ಜಂಕ್ಷನ್ ಬಳಿ 13,200 ಚದರಡಿ ಜಾಗದಲ್ಲಿ ಔಡಿ ಕಾರ್ ಸರ್ವಿಸ್ ನೀಡಲಾಗುತ್ತದೆ ಎಂದು ಶ್ರೀವಾಸ್ತವ್ ಹೇಳಿದರು.
ಮಂಗಳೂರು ಜನರಲ್ ಮ್ಯಾನೇಜರ್ ರವೀಂದ್ರ ಪೈ ಮಾತನಾಡಿ, ರಾಜ್ಯ ಕರಾವಳಿ ಮತ್ತು ಬೆಳಗಾವಿ, ಉತ್ತರ ಕರ್ನಾಟಕ ಗ್ರಾಹಕರಿಗೆ ಸೇವೆ ನೀಡುತ್ತೇವೆ ಎಂದರು.
ಮಂಗಳೂರು ಮತ್ತು ಬೆಂಗಳೂರು ಶೋರೂಮ್ ಸಿಇಒ ಕೆ.ಸುಬ್ರಮಣಿಯನ್ ಇದ್ದರು.