ನಾಳೆ ರಕ್ತದಾನ ಶಿಬಿರ
ಮೂಲ್ಕಿ: ಗುತ್ತಕಾಡು ಯಂಗ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಶಾಂತಿನಗರ, ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಮಿತಿ ತಾಳಿಪಾಡಿ, ಶ್ರೀ ಮೂಕಾಂಬಿಕಾ ದೇವಸ್ಥಾನ ಶಾಂತಿನಗರ, ಶ್ರೀರಾಮ ಯುವಕ ವೃಂದ ಗೋಳಿಜೋರ, ಎಳತ್ತೂರು ಫ್ರೆಂಡ್ಸ್ ಕ್ಲಬ್ ಮತ್ತು ಮಹಿಳಾ ಘಟಕ, ಯೂತ್ ಕಾಂಗ್ರೆಸ್ ಘಟಕ ಕಿನ್ನಿಗೋಳಿ ಮತ್ತು ನಾಗರಿಕ ಹಿತ ರಕ್ಷಣಾ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ನ.24ರಂದು ಬೆಳಗ್ಗೆ ಗುತ್ತಕಾಡಿನ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.