ಮಿಲ್ ಮಾಲೀಕಗೆ 8.73 ಲಕ್ಷ ದಂಡ
ಮಂಗಳೂರು: ಶಿವಮೊಗ್ಗ ಭದ್ರಾವತಿ ಮಂಗೋಟೆ ಗ್ರಾಮದ ಎಚ್. ಹಾಲಪ್ಪ ಮಾಲೀಕತ್ವದ ಬಸವೇಶ್ವರ ಮಾಡ್ರನ್ ಬಿನ್ನಿ ರೈಸ್ ಮಿಲ್ಗೆ ಅಕ್ರಮ ವಿದ್ಯುತ್ ಸಂಪರ್ಕ ಮಾಡಿದ ಬಗ್ಗೆ ಶಿವಮೊಗ್ಗ ಮೆಸ್ಕಾಂ ಜಾಗೃತ ದಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗೆ 8,73,228 ದಂಡ ವಿಧಿಸಲಾಗಿದೆ. ಮೆಸ್ಕಾಂ ಎಸ್ಪಿ ಹರಿಶ್ಚಂದ್ರ ಪಿ., ಡಿವೈಎಸ್ಪಿ ವಿನಯ ಎ.ಗಾಂವ್ಕರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಕೆ.ಆರ್.ನಾಗರಾಜ್, ಸಿಬ್ಬಂದಿ ದಾಳಿ ನಡೆಸಿದ್ದರು. ವಿದ್ಯುತ್ ಕಳವು ಮಾಹಿತಿ ಇದ್ದಲ್ಲಿ 9480833069, 9448998729ನ್ನು ಸಂಪರ್ಕಿಸಬಹುದು.