ಡಿ.1ರಂದು ಕೊಂಕಣಿ ಕಾರ್ಯಾಗಾರ
ಮೂಲ್ಕಿ: ದಾಯ್ಚಿ ದುಬೈ ಇಂಡಿಯಾ ಮಂಗಳೂರು ಘಟಕದ ವತಿಯಿಂದ ಸ್ಥಳೀಯ ಕೊಂಕಣಿ ಸಂಘಟನೆಗಳ ಸಹಯೋಗದೊಂದಿಗೆ ಡಿ.1ರಂದು ಮೂರುಕಾವೇರಿಯ ಕೊಯಿಲಾದಲ್ಲಿ ಶಾಲೆ ವಿದ್ಯಾರ್ಥಿಗಳಿಗೆ ಒಂದು ದಿನದ ಕೊಂಕಣಿ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಕಿನ್ನಿಗೋಳಿ ಆಸುಪಾಸಿನ ಹಾಗೂ ನಗರದ 60 ಮಕ್ಕಳು ಭಾಗವಹಿಸಲಿದ್ದು ಮಕ್ಕಳಿಗೆ ಹಳ್ಳಿಯ ಜನಜೀವನದ ಮಾಹಿತಿ, ಕೊಂಕಣಿ ಶಬ್ಧ ಭಂಡಾರ ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುವುದು ಎಂದು ಎಂದು ಸಂಸ್ಥೆಯ ಹೇಮಾಚಾರ್ಯ ಕಿನ್ನಿಗೋಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.