ಮತಾಂತರಕ್ಕಾಗಿ ತಿರುಪತಿಯಲ್ಲಿ ಮುಸ್ಲಿಂ ವಿವಿ ಸ್ಥಾಪನೆ: ಶಿಂಧೆ
ಮಂಗಳೂರು: ತಿರುಪತಿಯಲ್ಲಿ ಮುಸ್ಲಿಂ ವಿ.ವಿ. ಸ್ಥಾಪಿಸುವ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡುವ ಹುನ್ನಾರ ಅಡಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ಹೇಳಿದರು.
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಎಸ್‌ಡಿಎಂ ಕಾಲೇಜ್‌ನಲ್ಲಿ ಭಾನುವಾರ ನಡೆದ ಹಿಂದೂ ಅಧಿವೇಶನದಲ್ಲಿ ಅವರು ಮಾತನಾಡಿದರು. ತಿರುಪತಿಯಲ್ಲಿ ಮುಸ್ಲಿಮರ ಸಂಖ್ಯೆ ಶೇ.0.05. ಫೈವ್‌ಸ್ಟಾರ್ ಶೈಲಿಯ ವಿ.ವಿ.ಯಲ್ಲಿ ಉಚಿತವಾಗಿ ಶಿಕ್ಷಣ ನೀಡುವಾಗ ಅಲ್‌ಗೆ ಹಿಂದೂ ಯುವತಿಯರು ಅಕರ್ಷಿತರಾಗಿ ಹೋಗುತ್ತಾರೆ. ಅಲ್ಲಿ ಇಸ್ಲಾಂ ಧರ್ಮದ ಬಗ್ಗೆಯೇ ಶಿಕ್ಷಣ ನೀಡಲಾಗುತ್ತಿದೆ. ಆದ್ದರಿಂದ ತಿರುಪತಿಯಲ್ಲಿ ವಿ.ವಿ. ಸ್ಥಾಪನೆ ಹಿಂದೆ ಮತಾಂತರ ಉದ್ದೇಶ ಅಡಗಿದೆ ಎಂದರು.
ಇಲ್ಲಿ ಇತ್ತೀಚೆಗೆ ಉಗ್ರರು ಸಿಕ್ಕಿದ್ದಾರೆ, ಭದ್ರತೆ ದೃಷ್ಟಿಯಿಂದಲೂ ಇಲ್ಲಿ ವಿ.ವಿ. ಬೇಡ. ನಮ್ಮ ಹೋರಾಟದ ಫಲವಾಗಿ ಹೆಚ್ಚುವರಿ 5 ಅಂತಸ್ತನ್ನು ಕೆಡವಲು ಆದೇಶ ನೀಡಿದೆ. ಆದರೆ ಸಮಿತಿ ಆ ವಿಶ್ವ ವಿದ್ಯಾಲಯವೇ ಸ್ಥಾಪನೆ ಆಗದಂತೆ ಹೋರಾಟ ನಡೆಸಲಿದೆ ಎಂದರು.
ಮಥುರಾದಲ್ಲಿ ಶ್ರೀಕೃಷ್ಣ ಹುಟ್ಟಿದ ಜೈಲ್‌ನ ಒಂದು ಕೋಣೆ ಮಾತ್ರ ದೇವಸ್ಥಾನದಲ್ಲಿದೆ, ಉಳಿದ 22 ಕೋಣೆಗಳು ಮಸೀದಿಯಾಗಿದೆ ಎಂದರು. ದೇಶದೆಲ್ಲೆಡೆ ಮೂರ್ತಿ ಪೂಜೆ ವಿರೋಧಿಸಲು ಮುಸ್ಲಿಂ ದೊರೆಗಳು ಮಂದಿರಗಳನ್ನು ಮೂರ್ತಿಗಳನ್ನು ಭಗ್ನ ಮಾಡಿದರು. ಅವರು ಹಜ್ ಯಾತ್ರೆ ವೇಳೆ ದೊಡ್ಡ ಕಂಬಕ್ಕೆ ಸೈತಾನ ಎಂದು ಹೇಳಿ ಕಲ್ಲು ಹೊಡೆಯುತ್ತಾರೆ. ಅವರು ಕಲ್ಲಿನಲ್ಲಿ ಸೈತಾನನ್ನು ಕಾಣಬಹುದು, ನಾವು ಕಲ್ಲಿನಲ್ಲಿ ದೇವರನ್ನು ಕಾಣುವುದು ತಪ್ಪೇ ಎಂದು ಪ್ರಶ್ನಿಸಿದರು.
ಭಾರತ ಸ್ವಾಭಿಮಾನ ಟ್ರಸ್ಟ್ ಡಾ.ಜ್ಞಾನೇಶ್ವರ ಕಾಮತ್ ಮಾತನಾಡಿ, ವಿದೇಶಿಯರಿಗೆ ಭಾರತ ಕೇವಲ ಮಾರುಕಟ್ಟೆ. ಎಷ್ಟೋ ಉತ್ಪನ್ನಗಳು ದೇಶೀಯ ಹೆಸರು ಇಟ್ಟುಕೊಂಡು ಭಾರತೀಯರನ್ನು ವಂಚಿಸುತ್ತಿವೆ ಎಂದರು.
ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಮಾತನಾಡಿ, ಸಾಂಸ್ಕೃತಿಕ ಶ್ರದ್ಧಾಕೇಂದ್ರವಾದ ದೇವಸ್ಥಾನಗಳಿಗೆ ಪ್ರವಾಸ ನಿಷೇಧಿಸಿದ ಸರ್ಕಾರ, ಬೀಚ್ ಪ್ರವಾಸದ ಸಂಸ್ಕಾರ ಬಿತ್ತುತ್ತಿದೆ, ಅನೇಕ ಸಂತರು, ಶಾಸಕರನ್ನು ಸಂಪರ್ಕಿಸಿದ್ದು, ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.
ಸಮಿತಿಯ ಪ್ರಸನ್ನ ಕಾಮತ್ ಅಧಿವೇಶನ ಉದ್ದೇಶ ತಿಳಿಸಿದರು. ಮುಖ್ಯಪ್ರಾಣ ದೇವಸ್ಥಾನ ಪ್ರಧಾನ ಅರ್ಚಕ ಗುರುರಾಜ ಶಾಸ್ತ್ರಿ, ವಕೀಲ ಗಣೇಶ್ ಶೆಣೈ ಇದ್ದರು.