ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೆನರಾ ಬ್ಯಾಂಕ್ ಶಾಖೆ ಉದ್ಘಾಟನೆ

Mainashree
Updated On : 26 Nov 2013, 10:34 am

ಬೆಳ್ತಂಗಡಿ:  ಧರ್ಮಸ್ಥಳದಲ್ಲಿ ಕೆನರಾ ಬ್ಯಾಂಕಿನ 4445ನೇ ಶಾಖೆಯನ್ನು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
 ಸ್ಪರ್ಧಾತ್ಮಕವಾದ ಸೇವೆ ಗ್ರಾಹಕರನ್ನು ಆಕರ್ಷಿಸುತ್ತದೆ. ಯೋಗ್ಯ ಸಾಲಗಾರನಾಗಬೇಕಾದರೆ ಸೂಕ್ತವಾದ ಸ್ವ ಉದ್ಯೋಗದ ತರಬೇತಿ ಪಡೆದಿರಬೇಕು. ಆಗ ಮಾತ್ರ ಅಧಿಕಾರಯುತವಾಗಿ ಸಾಲ ಪಡೆಯಲು ಸಾಧ್ಯ ಎಂದು ಡಾ. ಹೆಗ್ಗಡೆ ಹೇಳಿದರು.
 ಕೆನರಾ ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ಮಾತನಾಡಿದರು. ಈ ಸಂದರ್ಭ ಬ್ಯಾಂಕಿನ ವತಿಯಿಂದ ಡಾ. ಹೆಗ್ಗಡೆಯವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಕೆನರಾ ವಿದ್ಯಾಜ್ಯೋತಿ ವಿದ್ಯಾರ್ಥಿವೇತನವನ್ನು ಬೆಳ್ತಂಗಡಿ ಪಟ್ಟಣದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಯಿತು. ಧರ್ಮಸ್ಥಳದ ಪರಿಶಿಷ್ಟ ಗಿರಿಜನ ವಸತಿ ಶಾಲೆಗೆ ವಾಟರ್ ಕೂಲರ್ ಅನ್ನು ಬ್ಯಾಂಕಿನ ವತಿಯಿಂದ ನೀಡಲಾಯಿತು.
ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಗೀತಾ, ಮಂಗಳೂರು ವೃತ್ತದ ಸಹಾಯಕ ಮಹಾಪ್ರಬಂಧಕ ಐ.ಸಿ.ಶೆಟ್ಟಿ, ಸಹಾಯಕ ಪ್ರಬಂಧಕ ವಿನಾಯಕ ಕಾಮತ್, ಹಷೇಂದ್ರ ಕುಮಾರ್, ಪ್ರೊ. ಪ್ರಭಾಕರ್. ಡಾ.ಎಲ್.ಎಚ್. ಮಂಜುನಾಥ್ ಇದ್ದರು.
ರುಡ್ಸೆಟ್ ನಿರ್ದೇಶಕ ಎಂ.ಕೆ.ಎಸ್. ಪ್ರಭು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಅನಸೂಯಾ ಪ್ರಾರ್ಥಿಸಿದರು. ಮಂಗಳೂರು ವೃತ್ತ ಉಪ ಮಹಾ ಪ್ರಬಂಧಕ ಸುಜಾತ ಕರುಣಾಕರನ್ ಸ್ವಾಗತಿಸಿದರು. ಬ್ಯಾಂಕಿನ ಧರ್ಮಸ್ಥಳ ಶಾಖಾಧಿಕಾರಿ ಎಸ್.ಆರ್. ಪ್ರಭು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement