ಪಾನೀಯ ಸೇವಿಸಿ ಅಸ್ವಸ್ಥ: ಉಪ್ಪಿನಂಗಡಿಗೆ ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ತಂಡ ಭೇಟಿ
ಉಪ್ಪಿನಂಗಡಿ: ದ.ಕ. ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ಅವರ ತಂಡ ಭಾನುವಾರ ಉಪ್ಪಿನಂಗಡಿಗೆ ಭೇಟಿ ನೀಡಿ, ಪಾನೀಯ ಸೇವಿಸಿ ಅಸ್ವಸ್ಥರಾದ ಪ್ರಕರಣದ ಬಗ್ಗೆ ವಿಚಾರ ವಿಮರ್ಶೆ ನಡೆಸಿದರು.
ಬೆಳ್ತಂಗಡಿ ತಾಲೂಕು ಉರುವಾಲು ಪದವು ಎಂಬಲ್ಲಿನ ನಿನ್ನಿಕ್ಕಲ್ ಮನೆಯೊಂದರಲ್ಲಿ ಮರಣ ಕಾರ್ಯದಲ್ಲಿ ಭಾಗವಹಿಸಲು ಬಂದವರು ಪಾನೀಯ ಸೇವಿಸಿ 22 ಮಂದಿ ಅಸ್ವಸ್ಥರಾದ ಪ್ರಕರಣದಲ್ಲಿ ಚಿಕಿತ್ಸೆ ನೀಡಲಾದ ಆಸ್ಪತ್ರೆಗೆ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ನಡೆಸಿದರು.
ಪಾನೀಯ ಸೇವಿಸಿ ಅಸ್ವಸ್ಥರಾದ 22 ಮಂದಿಯೂ ಚೇತರಿಕೆ ಹೊಂದಿದ್ದಾರೆ. ಘಟನೆಗೆ ಕಾರಣವೇನೆಂಬುವುದನ್ನು ಪರೀಕ್ಷೆಯ ಬಳಿಕ ಖಚಿತಪಡಿಸಲಾಗುವುದು ಎಂದದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಆರೋಗ್ಯಾಧಿಕಾರಿಯವರೊಂದಿಗೆ ಜಿಲ್ಲಾ ಆರೋಗ್ಯ ಸರ್ವೆಚನಾಧಿಕಾರಿ ರಾಜೇಶ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಅಬೂಬಕ್ಕರ್ ಇದ್ದರು.
ಉಪ್ಪಿನಂಗಡಿ ವೈದ್ಯಾಧಿಕಾರಿ ಡಾ. ಶಶಿಕಲಾ, ಧನ್ವಂತರಿ ಆಸ್ಪತ್ರೆಯ ವೈದ್ಯ ಡಾ. ನಿರಂಜನ್ ರೈ ನಿಯೋಗಕ್ಕೆ ಅಗತ್ಯ ಮಾಹಿತಿ ನೀಡಿದರು.