ಪುತ್ತೂರು: 28ರಂದು ರ್ಯಾಲಿ, ಪ್ರತಿಭಟನೆ
ಪುತ್ತೂರು: ದೇಶಾದ್ಯಂತ ಹಲವು ಭಯೋತ್ಪಾದನಾ ರಾಜಕೀಯ ನಡೆಯುತ್ತಿದ್ದು, ಇದನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮತ್ತು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶಾದ್ಯಂತ ಎಸ್ಡಿಪಿಐ ವತಿಯಿಂದ 'ಭಯೋತ್ಪಾದನಾ ರಾಜಕೀಯ ಅಂತ್ಯಗೊಳಿಸಿ' ರ್ಯಾಲಿ, ಪ್ರತಿಭಟನೆ ಹಾಗೂ ವಿಚಾರ ಸಂಕಿರಣಗಳು ನಡೆಯುತ್ತಿದ್ದು, 28 ರಂದು ಪುತ್ತೂರು ತಾಲೂಕಿನಾದ್ಯಂತ ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಕೆ.ಎ. ಸಿದ್ದಿಕ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.