ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧಕ್ಕೆ ಮಲ್ಪೆ ಆಳಸಮುದ್ರ ಮೀನುಗಾರರ ವಿರೋಧ

Mainashree
Updated On : 26 Nov 2013, 10:37 am

ಉಡುಪಿ: ಕರ್ನಾಟಕ ತೀರದ ಸಮುದ್ರದಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆಯನ್ನು ನಿಷೇಧಿಸಲಾಗುವುದು ಎಂಬ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಅವರ ಹೇಳಿಕೆಯನ್ನು ಮಲ್ಪೆಯ ಫಿಶರ್‌ಮೆನ್ ಡೀಪ್ ಸೀ ಟ್ರಾಲ್‌ಬೋಟ್ ಅಸೋಸಿಯೇಶನ್ ತೀವ್ರವಾಗಿ ಖಂಡಿಸಿದೆ.
ಸಚಿವರು ಮೀನುಗಾರರ ಸಂಘಟನೆಗಳೊಂದಿಗೆ ಪರಮರ್ಶೆ ನಡೆಸದೆ, ಕೇವಲ ಶೇ. 7ರಷ್ಟು ಪರ್ಸೀನ್ ಬೋಟು ಮಾಲೀಕರ ಮಾತನ್ನು ನಂಬಿ, ಏಕಾಏಕಿ ಶೇ. 93ರಷ್ಟಿರುವ ಬುಲ್‌ಟ್ರಾಲ್ ಮೀನುಗಾರಿಕೆಯನ್ನು ನಿಷೇಧಿಸಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಗೋಪಾಲ್ ಕುಂದರ್, ಮೀನುಗಾರಿಕಾ ಸಂತತಿಗೆ ಅಪಾಯಕಾರಿಯಾಗಿರುವ ಅತ್ಯಾಧುನಿಕ 75 ವಿದೇಶಿ ಬುಲ್‌ಟ್ರಾಲ್ ಬೋಟುಗಳಿಗೆ ನಮ್ಮ ಕರಾವಳಿಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿದೆ. ಇದನ್ನು ಮೊದಲು ನಿಷೇಧಿಸಲಿ ಎಂದರು.
ಅಲ್ಲದೇ ಮಳೆಗಾಲದಲ್ಲಿ 50 ದಿನಗಳ ಮೀನುಗಾರಿಕಾ ನಿಷೇಧದ ಸಂದರ್ಭದಲ್ಲಿ ಕೇವಲ ಟ್ರಾಲ್ ಬೋಟುಗಳನ್ನು ಮಾತ್ರ ನಿಷೇಧಿಸಲಾಗುತ್ತಿದೆ, ಇದು ಸರಿಯಲ್ಲ. ಮೀನು ಸಂತತಿ ಉಳಿಯಬೇಕಾದರೆ ಎಲ್ಲಾ ರೀತಿಯ ಮೀನುಗಾರಿಕೆಯನ್ನು ನಿಷೇಧಿಸಬೇಕು. ಮೀನಿನ ಸಂಸತಿ ಉಳಿಯಬೇಕಾದರೇ 30 ಮಿ. ಕ್ಕಿಂತ ಕಡಿಮೆ ರಂದ್ರ ಉಳ್ಳ ಬಲೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಫಿಶ್‌ಮಿಲ್‌ನವರು ಹೊರರಾಜ್ಯದಿಂದ ಬರುವ ತ್ಯಾಜ್ಯ (ಆಹಾರವಾಗಿ ಬಳಸಲಾಗದ) ಮೀನನ್ನು ಹೆಚ್ಚು ಬೆಲೆ ನೀಡಿ ಖರೀದಿಸುತ್ತಾರೆ ಎಂದು ಹೇಳಿದರು.
ಸ್ಥಳೀಯ ಮೀನುಗಾರರ ಬೆಲೆಗ ಬೀಳುವ ತ್ಯಾಜ್ಯ ಮೀನಿಗೆ ಕಡಿಮೆ ಬೆಲೆ ನೀಡುತ್ತಿದ್ದಾರೆ. ಇದರಿಂದ ಸ್ಥಳೀಯ ಮೀನುಗಾರರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಹೊರರಾಜ್ಯದಿಂದ ತ್ಯಾಜ್ಯ ಮೀನು ಆಮದನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ದಯಾನಂದ ಕುಂದರ್, ಉಪಾಧ್ಯಕ್ಷ ಕಿಶೋರ್ ಡಿ. ಸುವರ್ಣ, ವಿಠಲ ಕರ್ಕೇರ, ಕಾರ್ಯದರ್ಶಿ ಗೋಪಾಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement