ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ: ಕಂದಾಯ ಇಲಾಖೆಯಿಂದ ಪಿಂಚಣಿ ಅದಾಲತ್

Mainashree
Updated On : 26 Nov 2013, 10:34 am

ಸುಳ್ಯ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಮಂಜೂರಾತಿ ಪತ್ರ ವಿತರಣೆ, ಅರ್ಜಿ ಸ್ವೀಕಾರ ಮತ್ತು ಇತ್ಯರ್ಥಪಡಿಸುವ ಸುಳ್ಯ ಹೋಬಳಿ ಪಿಂಚಣಿ ಅದಾಲತ್ ಕಾರ್ಯಕ್ರಮವು ಸುಳ್ಯ ತಾಲೂಕು ಕಚೇರಿಯಲ್ಲಿ ಜರಗಿತು.
ಸುಳ್ಯ ನಗರ ಪಂಚಾಯಿತಿ ಸದಸ್ಯ ಕೆ.ಎಂ. ಮುಸ್ತಫ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು. ನಗರ ಪಂಚಾಯಿತಿ ಸದಸ್ಯರಾದ ಪ್ರೇಮಾ ಟೀಚರ್, ಉಬರಡ್ಕ ಗ್ರಾ,ಪಂ. ಮಾಜಿ ಅಧ್ಯಕ್ಷ ಪಿ.ಎಸ್. ಗಂಗಾಧರ ಇದ್ದರು.ತಹಸೀಲ್ದಾರ್ ಜಯಶ್ರೀ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಳಿಕ ಮಾತನಾಡಿದ ಅವರು ನೂತನ ಸರ್ಕಾರದ ಪಿಂಚಣಿ ಅದಾಲತ್ ಯೋಜನೆಯಡಿಯಲ್ಲಿ ಸುಳ್ಯ ಹೋಬಳಿಯ ಎರಡನೇ ಪಿಂಚಣಿ ಅದಾಲತ್ ಇದಾಗಿದ್ದು, ಇನ್ನು ಮುಂದೆ ಪ್ರತಿ ತಿಂಗಳು ಅಥವಾ ಪಾಕ್ಷಿಕವಾಗಿ ಇದು ಮುಂದುವರಿಯಲಿದೆ ಎಂದರು. ಕಂದಾಯ ನಿರೀಕ್ಷಕರಾದ ಮುರಳೀಧರ ವಂದಿಸಿದರು. ಕಾರ್ಯಕ್ರಮದಲ್ಲಿ ಸುಳ್ಯ ಹೋಬಳಿಯ ಗ್ರಾಮ ಕರಣಿಕರು, ವಿಷಯ ನಿರ್ವಾಹಕಿ ವೇದಾವತಿ, ಸಿಬ್ಬಂದಿ ನಾರಾಯಣ, ರಜಾಕ್ ಸಹಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement