ಜನಸಾಮಾನ್ಯನೆಡೆಗೆ ರಿಸರ್ವ್ ಬ್ಯಾಂಕ್ ನಡಿಗೆ: ಪದ್ಮನಾಭನ್
ಬೆಳ್ತಂಗಡಿ: ದೇಶದ ಆರ್ಥಿಕತೆಯ ಲಾಭ ಸಮಾಜದ ಎಲ್ಲ ವರ್ಗದವರಿಗೆ ತಲುಪಬೇಕು ಎಂಬ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ಸಾಕ್ಷರತೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಆರ್ಬಿಐನ ಬೆಂಗಳೂರು ಪ್ರಾದೇಶಿಕ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಪದ್ಮನಾಭನ್ ಹೇಳಿದರು. ಅವರು ಮಂಗಳವಾರ ಪಡಂಗಡಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ್ಡಿದ್ದ ಜನಸಾಮಾನ್ಯನೆಡೆಗೆ ರಿಸರ್ವ್ ಬ್ಯಾಂಕ್ ನಡಿಗೆ ಎಂಬ ಕಾರ್ಯಕ್ರಮದಲ್ಲಿ ಬ್ಯಾಂಕಿನ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಜನಸಾಮಾನ್ಯನನ್ನು ಬ್ಯಾಂಕ್ ವ್ಯವಹಾರದ ಬಗ್ಗೆ ತಿಳುವಳಿಕಸ್ಥನನ್ನಾಗಿ ಮಾಡುವುದಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಣಕಾಸನ್ನು ಒದಗಿಸುವ, ಹಣಕಾಸು ನೀತಿಯನ್ನು ರೂಪಿಸುವ ಮತ್ತು ಸದೃಢ ಆರ್ಥಿಕ ವ್ಯವಸ್ಥೆಯನ್ನು ಮಾಡುವ ಕೆಲಸ ರಿಸರ್ವ್ ಬ್ಯಾಂಕಿನದ್ದಾಗಿದೆ. ಬ್ಯಾಂಕ್ ನಿಯಮ ಪ್ರಕಾರ ಕೆಲಸ ಮಾಡುವ ಮೂಲಕ ದೇಶದ ಅಭಿವೃದ್ಧಿಯ ಕೆಲಸವನ್ನೂ ಮಾಡುತ್ತಿದೆ ಎಂದರು.
ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷ ಸುಧೀರ್ ಕುಮಾರ್ ಜೈನ್, ಎಸ್ಬಿಐನ ಮಹಾ ಪ್ರಬಂಧಕಿ ನಂದಿನಿ ರೋಡ್ರಿಕ್ಸ್, ಜಿಪಂ ಸಿಇಒ ತುಳಸಿ ಮದ್ದಿನೇನಿ, ಪಡಂಗಡಿ ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ಇದ್ದರು.