ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೆಂಗಳೂರಲ್ಲಿ ಕಾರು ಕದ್ದವರು ಉಪ್ಪಿನಂಗಡಿಯಲ್ಲಿ ಸಿಕ್ಕಿ ಬಿದ್ದರು

Rashmi Kasaragodu
Updated On : 27 Nov 2013, 12:41 pm

ಉಪ್ಪಿನಂಗಡಿ: ಬೆಂಗಳೂರಿನಲ್ಲಿ ಕಳವು ಮಾಡಿದ್ದ ಕಾರಿನೊಂದಿಗೆ ಉಪ್ಪಿನಂಗಡಿಗೆ ಬಂದಿದ್ದ ಆರೋಪಿಗಳಿಬ್ಬರನ್ನು ಉಪ್ಪಿನಂಗಡಿ ಪೊಲೀಸರು ದಸ್ತಗಿರಿ ಮಾಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕಾರು ಕಳವು ಮಾಡಿದ್ದ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಮಂಗಳವಾರ ಉಪ್ಪಿನಂಗಡಿ ಪೊಲೀಸರು ಪರಿಶೀಲನಾ ನಿರತರಾಗಿದ್ದಾಗ ಉಪ್ಪಿನಂಗಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತನ ಹೆಸರು ಪ್ರಮೋದ್ ಎಂದೂ, ಆತನೊಂದಿಗೆ ಇನ್ನೊಬ್ಬ ಸಾಜಿ ಬಿನ್ ವರ್ಗೀಸ್ ಎಂಬಾತ ಇರುವುದು ತಿಳಿಯಿತು. ಆದರೆ ಪೊಲೀಸರು ಪ್ರಮೋದ್ನನ್ನು ವಿಚಾರಿಸುತ್ತಿರುವುದನ್ನು ಬಾರ್ನಿಂದಲೇ ನೋಡಿದ ಸಾಜಿ ಅಲ್ಲಿಂದ ಪರಾರಿಯಾಗಿದ್ದ. ಪ್ರಮೋದ್ ಹಾಗೂ ಕಾರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಪರಾರಿಯಾದವನ ಪತ್ತೆಗಾಗಿ ಉಪ್ಪಿನಂಗಡಿಯ ಹಲವೆಡೆ ನಿಗಾ ಇಟ್ಟಿದ್ದರು. ಮಂಗಳವಾರ ಸಾಯಂಕಾಲದ ವೇಳೆ ಮತ್ತೆ ಅದೇ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಸಾಜಿ ಬಂದಾಗ ಪೊಲೀಸರು ಸ್ಥಳೀಯರ ನೆರವಿನಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರುಗಳ್ಳರು ಕೇರಳ ಮೂಲದವರಾಗಿದ್ದು ಬೆಂಗಳೂರಿನಲ್ಲಿ ಹಲವಾರು ವಾಹನ ಕಳವು ಪ್ರಕರಣದಲ್ಲಿ ತೊಡಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಈ ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement