ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆಳ್ವಾಸ್ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ ಫಲಿತಾಂಶ

Lingaraj Badiger
Updated On : 28 Nov 2013, 11:20 am

ಮಂಗಳೂರು: ಡಿಸೆಂಬರ್‌ನಲ್ಲಿ ನಡೆಯಲಿರುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಅಂಗವಾಗಿ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ ಫಲಿತಾಂಶ ಪ್ರಕಟವಾಗಿದೆ. 4 ವಿಭಾಗಗಳಿಂದ 3648 ಛಾಯಾಚಿತ್ರಗಳು ಬಂದಿದ್ದವು.
ಸಾಂಸ್ಕೃತಿಕ ಭಾರತ ವಿಭಾಗದಲ್ಲಿ ಬಾಗಲಕೋಟೆ ಇಂದ್ರಕುಮಾರ್ ಪ್ರಥಮ, ಅಭ್ಯುತ್ ಘೋಷ್, ವಿ.ಕೆ.ಆರ್.ಎಸ್. ಶರ್ಮ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.
ಗ್ರಾಮೀಣ ಭಾರತದಲ್ಲಿ ವಿಜಯವಾಡ ತಮ್ಮ ಶ್ರೀನಿವಾಸ ರೆಡ್ಡಿ ಪ್ರಥಮ, ಬೆಂಗಳೂರಿನ ಎಚ್.ಸತೀಶ್ ಮತ್ತು ಸುಧೀರ್ ಭಜನೆಹಟ್ಟಿ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.
ಲ್ಯಾಂಡ್‌ಸ್ಕೇಪ್ ವಿಭಾಗದಲ್ಲಿ ಪಶ್ಚಿಮ ಬಂಗಾಲದ ಡೆ ಗರ್ಗಿ ಪ್ರಥಮ, ಕಲ್ಪನಾ ಷಾ ದ್ವಿತೀಯ, ಸುಧೀರ್ ಸಕ್ಸೇನಾ ತೃತೀಯ ಬಹುಮಾನ.
ಭಾರತ ಪ್ರವಾಸಿ ತಾಣಗಳಲ್ಲಿ ಹೌರಾ ವಿಕ್ ಘೋಷ್ ಪ್ರಥಮ, ಬೆಂಗಳೂರು ಗಣಪತಿ ಹೆಗಡೆ ದ್ವಿತೀಯ, ಮುಂಬಯಿ ಹರಿ ತಿಲಕ್ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರತಿ ವಿಭಾಗದಲ್ಲಿ  ತಲಾ 10 ಸರ್ಟಿಫಿಕೆಟ್ ಆಫ್ ಮೆರಿಟ್ ಪ್ರಶಸ್ತಿ ನೀಡಲಾಗಿದೆ.
 ವಿಜೇತರ ಚಿತ್ರಗಳನ್ನು ಮೂಡಬಿದರೆಯಲ್ಲಿ ಜರಗುವ ವಿಶ್ವನುಡಿಸಿರಿ ವಿರಾಸತ್‌ನಲ್ಲಿ ಪ್ರದರ್ಶಿಸಲಾಗುವುದು.  
ಭಾರತ ಕಂಡ 50 ಮಹಾನ್ ಛಾಯಾಚಿತ್ರಕಾರರ ಕೃತಿಗಳನ್ನು ಇದೇ ಸಂದರ್ಭ ಪ್ರದರ್ಶಿಸಲಾಗುವುದು ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
--
ಇಂದು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಮಂಗಳೂರು: ಗದಗಿನ ವಿಜಯ ಕಲಾ ಮಂದಿರದ ಉಪನ್ಯಾಸಕ ಶರಣಪ್ಪ ಬಿ.ಎಚ್ ಎಂಬುವವರ 'ಏಕವ್ಯಕ್ತಿ ಕಲಾಕೃತಿ' ಪ್ರದರ್ಶನವು ನಗರದ ಪ್ರಸಾದ ಆರ್ಟ್ ಗ್ಯಾಲರಿಯಲ್ಲಿ ನ. 28 ರಿಂದ 30ರವರೆಗೆ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುವ ಪ್ರದರ್ಶನವನ್ನು ಉದ್ಯಮಿ ತಿಲಕರಾಜ ಉದ್ಘಾಟಿಸುವರು. ಪ್ರಸಾದ್ ಆರ್ಟ್ ಗ್ಯಾಲರಿಯ ಗಣೇಶ್ ಸೋಮಯಾಜಿ ಪಾಲ್ಗೊಳ್ಳುವರು. ಇವರ ಕಲಾಕೃತಿಯಲ್ಲಿ ವಿವಿಧ ರಾಜ್ಯದ ಹಾಗೂ ದೇಶ ವಿದೇಶಗಳ ಸಂಗ್ರಹಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement