ತೆಂಡೂಲ್ಕರ್ ಸಹಭಾಗಿತ್ವದ ಸ್ನೇಡರ್ ಸಂಸ್ಥೆಯಿಂದ ಸೋಲಾರ್ ಲೈಟ್ ವಿತರಣೆ
ಬೆಳ್ತಂಗಡಿ: ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹಭಾಗಿತ್ವದ ಸ್ನೇಡರ್ ಎಲೆಕ್ಟ್ರಿಕ್ ವತಿಯಿಂದ ನಕ್ಸಲ್ ಪ್ರಭಾವಿತ ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 201 ಕುಟುಂಬಗಳಿಗೆ ಸೋಲಾರ್ ಲೈಟ್ಅನ್ನು ಇತ್ತೀಚೆಗೆ ಮಲವಂತಿಗೆಯಲ್ಲಿ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಜನಾರ್ದನ, ಉಪಾಧ್ಯಕ್ಷೆ ವಿಮಲಾ, ಸದಸ್ಯರಾದ ದಿನೇಶ್ ಗೌಡ, ಅರುಣ್ ಕುಮಾರ್, ಪಿ. ಮಹಮ್ಮದ್, ಪ್ರಭಾರ ಪಿಡಿಒ ತಾರಾನಾಥ ನಾಯ್ಕ ಮತ್ತು ಸ್ವಯಂಸೇವಾ ಸಂಸ್ಥೆಯ ಪದಾಧಿಕಾರಿಗಳು ಇದ್ದರು.
ಪಂಚಾಯಿತಿ ವ್ಯಾಪ್ತಿಯ ಸುರುಳಿ, ಬೊಳ್ಳೆ, ಎಳನೀರು, ಗುತ್ಯಡ್ಕ, ಬಡಾಮನೆ, ಮಾದಲ್ಮಕ್ಕಿ, ಪಣಿಕ್ಕಲ್, ಕರಿಯಾಲು, ನೇತ್ರಕೊಡಂಗೆ ಪ್ರದೇಶಗಳ ಕುಟುಂಬಗಳಿಗೆ ಸೋಲಾರ್ ಲೈಟ್ ವಿತರಿಸಲಾಗುತ್ತಿದೆ. ಇದರ ವೆಚ್ಚವನ್ನು ಸಚಿನ್ ತೆಂಡೂಲ್ಕರ್ ವಹಿಸಲಿದ್ದಾರೆ.