ಕಟೀಲು ದೇವಳದಲ್ಲಿ ಶೇಷ ವಸ್ತ್ರ ವಿತರಣೆ
ಮೂಲ್ಕಿ: ಕಟೀಲು ಶ್ರೀ ದುರ್ಗಾಪಮೇಶ್ವರಿ ದೇವಳದಲ್ಲಿ ಬುಧವಾರ ಲಲಿತಾ ಪಂಚಮಿಯ ಸಂದರ್ಭದಲ್ಲಿ ಸುಮಾರು 50000 ಕ್ಕೂ ಮಿಕ್ಕಿ ಭಕ್ತರು ದೇವಳಕ್ಕೆ ಭೇಟಿ ನೀಡಿದ್ದು ಸಂಜೆ ಬಳಿಕ ಶ್ರೀ ದೇವಿಗೆ ಸೇವಾ ರೂಪದಲ್ಲಿ ಬಂದಂತಹ ಸೀರೆ(ಶೇಷ ವಸ್ತ್ರ)ಗಳನ್ನು ದೇವಳದ ಅರ್ಚಕರು ಸುಮಾರು 25000ಕ್ಕೂ ಮಿಕ್ಕಿ ಮಹಿಳೆಯರಿಗೆ ವಿತರಿಸಿದರು.
ಕುಮುಟಾದ ಯಾಜಿ ಮಿತ್ರ ಮಂಡಳಿಯವರಿಂದ ಸಂಜೆಯಿಂದ ರಾತ್ರಿವರೆಗೆ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು. ಕೊಡೆತ್ತೂರು ಗ್ರಾಮಸ್ತರ ವೈಭವದ ನವರಾತ್ರಿಯ ಹುಲಿವೇಷದ ಮೆರವಣೆಗೆಯು ದೇವಳಕ್ಕೆ ಆಗಮಿಸಿ ರಥಬೀದಿಯಲ್ಲಿ ಹುಲಿವೇಷದ ನರ್ತನ ಸೇವೆ ಜರಗಿತು.