ಕಟೀಲು, ಬಪ್ಪನಾಡಿನಲ್ಲಿ ಇಂದು
ಮೂಲ್ಕಿ: ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಅಕ್ಟೋಬರ್ 11ರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗಾನಗೋಕುಲ ನರೇಂದ್ರ ಅಡ್ವೆ ಬಳಗ ಮತ್ತು ತೋಕೂರಿನ ಶ್ರೀನಿವಾಸ ಆಚಾರ್ಯ ಬಳಗದವರಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದೇ ದಿನ ಸಂಜೆ ಚಿಕ್ಕಮಗಳೂರಿನ ಪುಂಡರೀಕ್ಷ ಭಾಗವತರಿಂದ ಭಕ್ತಿಗಾಯನ, ಸಂಜೆಯಿಂದ ರಾತ್ರಿಯವರೆಗೆ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಡಲಿದೆ.
ಬಪ್ಪನಾಡಿನಲ್ಲಿ ಚಂಡಿಕಾಯಾಗ: ಮೂಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಅಕ್ಟೋಬರ್ 11ರ ಬೆಳಿಗ್ಗೆ ಚಂಡಿಕಾಯಾಗ, ಸಂಜೆ ವಿದ್ವಾನ್ ಡಾ ಕೆ ವಾಗೀಶರಿಂದ ಕರ್ನಾಟಕ ಸಂಗೀತ ಕಚೇರಿ, ಮೂಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ಯುವಕ ವ್ರಂದದವರಿಂದ ಭಜನಾ ಕಾರ್ಯಕ್ರಮ ಜರಗಲಿದೆ.