ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜಾನುವಾರು ಸಾಗಾಟಗಾರರಿಗೆ ಥಳಿಸಿದ ಆರೋಪಿಗಳ ಸೆರೆ

Lingaraj Badiger
Updated On : 11 Oct 2013, 11:49 am

ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದಾಗ ಪಲ್ಟಿಯಾದ ಘಟನೆ ವೇಳೆ ಆರೋಪಿಗಳನ್ನು ಥಳಿಸಿದ ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆರೋಪಿ ಮೂಡುಶೆಡ್ಡೆಯ ಸಂತೋಷ್, ಭಾಸ್ಕರ, ಗುರುಪುರದ ಯತೀಶ್‌ರನ್ನು ಬಂಧಿಸಿದ ಪೊಲೀಸರು ಎರಡು ಬೈಕ್ ವಶಪಡಿಸಿದ್ದಾರೆ.
ಬುಧವಾರ ಕುಡುಪು ದೇವಸ್ಥಾನ ಬಳಿ ಅತೀ ವೇಗದಲ್ಲಿ ಆಗಮಿಸಿದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದನು. ಲಾರಿಯನ್ನು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೇ ಪರಾರಿಯಾದಾಗ ಸ್ಥಳೀಯರು ಲಾರಿಯನ್ನು ಬೆನ್ನಟ್ಟಿದ್ದರು. ಈ ಸಂದರ್ಭ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಕುಂಭಶ್ರಿ ಸಭಾಂಗಣ ಮುಂಭಾಗ ಬಳಿ ಮಗುಚಿ ಬಿದ್ದಿತು. ಲಾರಿಯಲ್ಲಿ 20ಕ್ಕೂ ಅಧಿಕ ಕೋಣಗಳನ್ನು ಅಮಾನವೀಯ ರೀತಿಯಲ್ಲಿ ಕಟ್ಟಿಹಾಕಿ ಅಕ್ರಮವಾಗಿ ಸಾಗಾಟ ಮಾಡುವುದು ಬೆಳಕಿಗೆ ಬಂದಿತ್ತು. ಆಗ ಲಾರಿಯಲ್ಲಿದ್ದ ಆರೋಪಿಗಳನ್ನು ಸ್ಥಳೀಯರು ಥಳಿಸಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement