ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಾಲವನ ಕಲಾವಿದರ ತಪೋಭೂಮಿಯಾಗಲಿ: ಜಂಬೆ

Mainashree
Updated On : 11 Oct 2013, 12:59 pm

ಪುತ್ತೂರು: ಡಾ. ಶಿವರಾಮ ಕಾರಂತರ ಬಾಲವನವು ರಂಗಭೂಮಿ ಕಲಾವಿದರಿಗೆ ತಪೋಭೂಮಿಯಾಗಬೇಕಾಗಿದ್ದು, ಇಂಥ ಪರಿಸರದಲ್ಲಿ ಕಲಾವಿದರ ತಪಸ್ಸು ನಡೆದರೆ ಕಾರಂತರ ಆಶಯಗಳನ್ನು ಗೌರವಿಸಿದಂತಾಗುತ್ತದೆ. ಬಾಲವನ ಕರಾವಳಿಯ ರಂಗಾಯಣವಾಗಲಿ ಎಂದು ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ ಆಶಯ ವ್ಯಕ್ತಪಡಿಸಿದರು.
 ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತರ ಬಾಲವನ ಸಮಿತಿ ಮತ್ತು ಪುತ್ತೂರು ಸಹಾಯಕ ಆಯಕ್ತರ ಕಚೇರಿ ವತಿಯಿಂದ ಗುರುವಾರ ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನದಲ್ಲಿ ನಡೆದ ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಹಾಗೂ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ಬಾಲವನ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.
 ಬಾಲವನದಲ್ಲಿ ಡಾ. ಕಾರಂತರ ನಾಟಕಗಳನ್ನು ಆಧರಿಸಿದ ನಾಟಕೋತ್ಸವ ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯವ್ಯಾಪಿ ಬಾಲವನದ ಪರಿಚಯವಾಗಬೇಕು. ಬಾಲವನವು ಕನ್ನಡದ ಶಾಂತಿನಿಕೇತನ ಎಂದು ಬಣ್ಣಿಸಿದರು.
ರಂಗಭೂಮಿ ಮೂಲಕ ಶಿಕ್ಷಣ: ಪ್ರಸ್ತುತ ಶಿಕ್ಷಣವು ಮಕ್ಕಳಿಗೆ ಭಾರವಾಗುತ್ತಿದ್ದು, ಅಂಕ ಆಧರಿತ ಶಿಕ್ಷಣ ವ್ಯವಸ್ಥೆ, ಶಿಕ್ಷಕರು ಮತ್ತು ಪೋಷಕರ ಒತ್ತಡದಿಂದ ಮಕ್ಕಳು ಆತಂಕಕ್ಕೆ ಒಳಗಾಗುತ್ತಿದ್ದಾರೆ. ರಂಗಭೂಮಿ ಮೂಲಕ ಶಿಕ್ಷಣ ನೀಡುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಸ್ವಂತಿಕೆ ಬೆಳೆಯುತ್ತದೆ. ಅದಕ್ಕಾಗಿ ಬಾಲವನದಲ್ಲಿ ರಂಗಶಿಕ್ಷಣ ನೀಡುವ ಕೆಲಸವಾಗಬೇಕು. ಈ ಬಗ್ಗೆ ಕನ್ನಡದ ಮನಸ್ಸುಗಳು ಸೇರಿಕೊಂಡು ಕಾರ್ಯೋನ್ಮುಖರಾಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement