ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಸಮಾಜದಲ್ಲಿ ಭಾರತೀಯತೆ ಮೇಳೈಸಲಿ'

Mainashree
Updated On : 11 Oct 2013, 1:00 am

ಮಂಗಳೂರು: ಯುವ ಪೀಳಿಗೆಯಲ್ಲಿ ಧರ್ಮ ಸಂಸ್ಕೃತಿ, ನಮ್ಮತನವನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಹಿರಿಯರ ಕರ್ತವ್ಯ. ಪ್ರಸ್ತುತ ಸಮಾಜದಲ್ಲಿಯೂ ಭಾರತೀಯತೆಯನ್ನು ತರಬೇಕಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ, ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಆಶಿಸಿದರು. ಅವರು ಗುರುವಾರ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ದಸರಾ ಉತ್ಸವ ಹಾಗೂ ಕ್ಷೇತ್ರ ಸ್ಥಾಪನೆಯ 151ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿ, ನಾವು ಕಾನೂನಿನಲ್ಲಿ ಮಾಡಲಾಗದ್ದನ್ನು ಮನಃ ಪರಿವರ್ತನೆ ಮೂಲಕ ಬದಲಾಯಿಸಿದ್ದೇವೆ. ಭ್ರಷ್ಟಾಚಾರ, ಅತ್ಯಾಚಾರಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ದುಷ್ಟಶಕ್ತಿಯನ್ನು ಮರ್ದಿಸಿ, ಶಿಷ್ಟ ಶಕ್ತಿಯನ್ನು ಪೋಷಿಸುವ ನವರಾತ್ರಿ ಆಚರಣೆಯ ಅರ್ಥವನ್ನು ಜೀವನದಲ್ಲಿ ಅನುಸರಿಸಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement