25ರಿಂದ ರಾಜ್ಯ ಮಟ್ಟದ ಟೇಬಲ್ ಟೆನಿಸ್
ಉಡುಪಿ: ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಮತ್ತು ಮಣಿಪಾಲ ವಿವಿ ವತಿಯಿಂದ ಉಡುಪಿ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ರಾಜ್ಯಮಟ್ಟದ ಟೇಬಲ್ ಟೆನಿಸ್ ಸ್ಪರ್ಧೆಯನ್ನು ಅ. 25, 26 ಮತ್ತು 27ರಂದು ಮಣಿಪಾಲದ ಎಂ.ಐ.ಟಿ. ಶಟ್ಲ್ ಬ್ಯಾಡ್ಮಿಂಟನ್ ಕೋರ್ಟ್ ಆಯೋಜಿಸಲಾಗಿದೆ.
ಸ್ಪರ್ಧೆ ಕೆಡೆಟ್, ಮಿನಿ ಕೆಡೆಟ್, ಜೂನಿಯರ್, ಸಬ್ ಜೂನಿಯರ್ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗಗಳಲ್ಲಿ ನಡೆಯಲಿದೆ. ಮತ್ತು ಪದಕರಹಿತ ಆಟಗಾರರಿಗೆ ಸಿಂಗಲ್ಸ್, ಡಬಲ್ಸ್ನಲ್ಲಿ ಹಾಗೂ 40 ವರ್ಷ ಮೇಲ್ಪಟ್ಟ ಪುರುಷರಿಗೆ ಸಿಂಗಲ್ಸ್ ವಿಭಾಗದಲ್ಲಿ ಪಂದ್ಯ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಬಿ.ಯು. ಕೃಷ್ಣಮೂರ್ತಿ (9448656210) ಅವರನ್ನು ಸಂರ್ಕಿಸಬಹುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.