ಉಡುಪಿ: ಮತ್ತೆ ಕಾಣಿಸಿದ ಮಳೆ
ಉಡುಪಿ: ಕಳೆದೊಂದು ತಿಂಗಳಿಂದ ಹಿಮ್ಮುಖವಾಗಿದ್ದ ಮಳೆ ಶನಿವಾರ ಮತ್ತೆ ಕಾಣಿಸಿಕೊಂಡಿದೆ. ಶನಿವಾರ ಮುಂಜಾನೆಯಿಂದಲೇ ಜೋರಾಗಿ ಆರಂಭವಾಗಿದ್ದ ಮಳೆ ಮಧ್ಯೆ ಕೆಲವು ಹೊತ್ತು ಬಿಡುವು ನೀಡಿತಾದರೂ ಮಧ್ಯಾಹ್ನ ಮತ್ತು ಸಂಜೆ ಮತ್ತೆ ಸುರಿಯಿತು.
ಒಡಿಶಾ- ಆಂಧ್ರಪ್ರದೇಶ ತೀರದಲ್ಲಿ ಉಂಟಾಗಿರುವ ಚಂಡಮಾರುತ ಪರಿಣಾಮ ಇದಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಜಿಲ್ಲಾ ಕಂಟ್ರೋಲ್ ರೂಮ್ಗೆ ಹವಾಮಾನ ಇಲಾಖೆಯಿಂದ ಯಾವುದೇ ಮುನ್ಸೂಚನೆ ಬಂದಿಲ್ಲ, ಯಾವುದಕ್ಕೂ ಪರಿಸ್ಥಿತಿಯನ್ನು ನೋಡಿ ಸಮುದ್ರಕ್ಕೆ ಇಳಿಯುವಂತೆ ಜಿಲ್ಲಾಡಳಿತ ಮೀನುಗಾರರಿಗೆ ಸೂಚನೆ ನೀಡಿದೆ.