ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Mainashree
Updated On : 12 Oct 2013, 11:41 am

ಚೆಲ್ಲಾಪಿಲ್ಲಿ ಶತದಿನ ಸಂಭ್ರಮ
ಮಂಗಳೂರು: ದಕ್ಷಿಣಕನ್ನಡದವರೇ ನಿರ್ಮಿಸಿ, ತುಳು ಕಲಾವಿದರೇ ಹೆಚ್ಚಿರುವ ಚೆಲ್ಲಾಪಿಲ್ಲಿ ಕನ್ನಡ ಸಿನಿಮಾ ಜ್ಯೋತಿ ಟಾಕೀಸ್‌ನಲ್ಲಿ ನೂರು ದಿನ ಪ್ರದರ್ಶನಗೊಂಡಿದೆ. ಹಬ್ಬದ ಸಂಭ್ರಮದಲ್ಲಿ ಮುಳುಗಿರುವ ಕನ್ನಡ ಚಿತ್ರ ರಸಿಕರಿಗೆ ಶತದಿನ ಸಂಭ್ರಮ ಇನ್ನಷ್ಟು ಖುಷಿ ಮೀಡಿದೆ. ಇದು ಚಿತ್ರ ತಂಡ ಹಾಗಾ ಚಿತ್ರ ರಸಿಕರ ಗೆಲವು ಎಂದು ಚಿತ್ರ ನಿರ್ದೇಶಕ ಸಾಯಿಕೃಷ್ಣ ಕುಡ್ಲ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದರಿಂದ ಇನ್ನಷ್ಟು ಹಾಸ್ಯ ಸಿನಿಮಾಗಳು ತಯಾರಾಗುತ್ತಿವೆ. ತುಳು ಸಿನಿಮಾ ಮಾಡಲೂ ಕನ್ನಡ ಚಿತ್ರ ನಿರ್ದೇಶಕರು, ನಿರ್ಮಾಪಕರು ಉತ್ಸಾಹ ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು ಸಿನಿಮಾಗಳು ನಿರ್ಮಾಣವಾಗುವ ವಿಶ್ವಾಸ ವ್ಯಕ್ತಪಡಿಸಿದರು. 100 ಸಿನಿಮಾ !:ಸಂಕಲನಕಾರ ನಾಗೇಂದ್ರ ಅರಸ್ ಮಾತನಾಡಿ, ಇದು ನನ್ನ ನೂರನೇ ಚಿತ್ರ, ನೂರು ದಿನ ಪೂರೈಸಿದ್ದು, ಸಂತಸ ತಂದಿದೆ.  ಮುಂದಿನ ತಿಂಗಳಲ್ಲಿ ನನ್ನ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಯ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದರು.  ಕನ್ನಡ ಚಿತ್ರರಂಗದಲ್ಲಿ ಹೊಸ ಅಭಿರುಚಿ ಚಿತ್ರಗಳಿಗೆ ಯಶಸ್ಸು ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಕಾದಂಬರಿ ಆಧರಿತ ಚಿತ್ರ ನಿರ್ಮಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಸುಧೇಶ್ ಭಂಡಾರಿ, ಸಹ ನಿರ್ಮಾಪಕ ಸುಕೇಶ್ ಭಂಡಾರಿ ಇದ್ದರು.
ಬಪ್ಪನಾಡು ದೇವಳದಲ್ಲಿ ಇಂದು
ಮೂಲ್ಕಿ: ನವರಾತ್ರಿ ಮಹೋತ್ಸವದ ಅಂಗವಾಗಿ ಮೂಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ 13ರಂದು ಬೆಳಗ್ಗೆ ಚಂಡಿಕಾಯಾಗ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಮಂಗಳೂರಿನ ಮೇಘ ಪೈ ಮತ್ತು ಬಳಗದಿಂದ ಭಕ್ತಿಗೀತೆ ಮತ್ತು ಭಾವಗೀತೆ, ಮಂಗಳೂರಿನ ಭರತಾಂಜಲಿಯ ಪ್ರತಿಭಾ ಶ್ರೀಧರ ಹೊಳ್ಳರ ಶಿಷ್ಯೆ ಅನ್ನಪೂರ್ಣ ಶೆಟ್ಟಿಯವರಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement