ಬಸ್-ಬೈಕ್ ಡಿಕ್ಕಿ: ಸವಾರ ಸಾವು
ಮೂಲ್ಕಿ: ಬಸ್- ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯ ಕಿರೆಂ ಚರ್ಚ್ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕಿನ್ನಿಗೋಳಿ ಸಮೀಪದ ಗುತ್ತಕಾಡು ನಿವಾಸಿ ಗಣೇಶ್ (25) ಮೃತರು. ಮುಂಡ್ಕೂರಿನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಖಾಸಗಿ ಸರ್ವಿಸ್ ಬಸ್ಸು ಹಾಗೂ ಕಿನ್ನಿಗೋಳಿಯಿಂದ ದಾಮಸ್ಕಟ್ಟೆಗೆ ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ತೀವ್ರ ಗಾಯಗೊಂಡ ಗಣೇಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕುಟುಂಬ ಅತಂತ್ರ: ಕಿನ್ನಿಗೋಳಿಯ ಗುತ್ತಕಾಡು ಶಾಲೆ ಬಳಿಯ ನಿವಾಸಿಯಾಗಿರುವ ಗಣೇಶ, ಬಸ್ಸು ಚಾಲಕನಾಗಿದ್ದು ಮನೆಯ ಆಧಾರಸ್ತಂಭವಾಗಿದ್ದ. ಆತನ ಮರಣದಿಂದ ಕುಟುಂಬ ಅತಂತ್ರವಾಗಿದೆ. ಮೃತರಿಗೆತಾಯಿ, ತಂದೆ, ಪತ್ನಿ, ಮಗು ಇದ್ದಾರೆ.