ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೈಕ್ ಅಡ್ಡಗಟ್ಟಿ ಮಾವ, ಸೊಸೆಗೆ ಹಲ್ಲೆ

Lingaraj Badiger
Updated On : 17 Oct 2013, 12:06 pm

ವಿಟ್ಲ; ಮಾವ ಮತ್ತು ಸೊಸೆ ಬಕ್ರೀದ್ ಹಬ್ಬದ ಅಂಗವಾಗಿ ಸಂಬಂಧಿಕರ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಯುವಕರಿಬ್ಬರು ತಡೆದು ಹಲ್ಲೆ ನಡೆಸಿದ ಘಟನೆ ಕನ್ಯಾನ ಸಮೀಪದ ಕಣಿಯೂರು ಎಂಬಲ್ಲಿ ನಡೆದಿದೆ.
ಕಾಂತಡ್ಕದ ಬೈರಿಕಟ್ಟೆ ಸಮೀಪದ ಅಂಗ್ರಿ ನಿವಾಸಿ ಶಮೀರ್ ಎಂಬವರು ತಮ್ಮ ಅಕ್ಕನ ಮಗಳು ಅಳಿಕೆ ಗ್ರಾಮದ ಕಲ್ಲಜೇರ ಮೊದುಕುಟ್ಟಿ ಎಂಬವರ ಪುತ್ರಿ ಜುವೇರಿಯಾ(16)ಳ ಜತೆ ಬೈಕ್‌ನಲ್ಲಿ ಮುಡಿಪು ಕಡೆಗೆ ಹೋಗುತ್ತಿದ್ದಾಗ ಕನ್ಯಾನ ಸಮೀಪದ ಕಣಿಯೂರು ಎಂಬಲ್ಲಿ ಕಣಿಯೂರು ನಿವಾಸಿ ಶಾಕಿರ್(24)ಎಂಬಾತ ಬೈಕ್ ತಡೆದು ನಿಲ್ಲಿಸಿ ಹುಡುಗಿಯ ವಿಚಾರವಾಗಿ ವಿಚಾರಿಸುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಇದರಿಂದ ಕುಪಿತನಾದ ಶಮೀರ್ ತನ್ನ ಅಕ್ಕನ ಮಗಳ ಜತೆ ಹೋದರೆ ನಿನಗೇನು ಎಂದು ಕೇಳಿದ್ದಾನೆ. ಹಾಗೆ ಹೇಳುತ್ತಿದ್ದಂತೆಯೆ ಆರೋಪಿ ಶಾಕಿರ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಮತ್ತೆ ಅಲ್ಲಿಂದ ಬೈಕನ್ನೇರಿ ಹೊರಟ ಮಾವ ಮತ್ತು ಸೊಸೆಯನ್ನು ವಿಜಯಡ್ಕ ಸಮೀಪ ಅದೇ ಶಾಕಿರ್ ಮತ್ತು ಇನ್ನೊಬ್ಬ ತಡೆದು ನಿಲ್ಲಿಸಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಲ್ಲದೆ ಜೀವಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆಂದು ಹೇಳಲಾಗಿದೆ. ಹಲ್ಲೆಗೊಳಗಾದ ಶಮೀರ್ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದು ಸೊಸೆ ಜುವೇರಿಯಾ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಜುವೇರಿಯಾ ಮಾವನ ಜತೆ ಹೋಗುತ್ತಿದ್ದಾಗ ಆರೋಪಿಗಳು ಇನ್ಯಾವುದೋ ಹುಡುಗಿಯೆಂದು ತಿಳಿದು ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement