ಸಜಿಪಮೂಡ: 87ನೇ ಶಾರದಾ ಪೂಜೆ ಸಂಭ್ರಮ
ಬಂಟ್ವಾಳ: ಮಹಾಲಕ್ಷ್ಮೀ, ಮಹಾಕಾಳಿ, ಮಹಾಸರಸ್ವತಿಯ ಶಕ್ತಿಗಳ ಸಮ್ಮಿಲನವಾದ ಜಗನ್ಮಾತೆಯ ಆರಾಧನೆಯ ಪರ್ವ ಎಂದು ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಹೇಳಿದ್ದಾರೆ.
ಸಜಿಪಮೂಡ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸಜಿಪ ವಠಾರದಲ್ಲಿ ಸುಭಾಷ್ ಯುವಕ ಮಂಡಲ ಮತ್ತು ಶ್ರೀ ಶಾರದಾ ಪೂಜಾ ಮಹೋತ್ಸವ ಸೇವಾ ಸಮಿತಿ ಸುಭಾಷ್ ನಗರದಲ್ಲಿ ನಡೆದ 87ನೇ ಶಾರದಾ ಪೂಜಾ ಮಹೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು. ನಂದಾವರ ಹಿ.ಪ್ರಾ.ಶಾಲಾ ಶಿಕ್ಷಕ ಎನ್. ವಿಠಲ್ ಶೆಟ್ಟಿ ನಗ್ರಿಗುತ್ತು, ನಗ್ರಿ ಶಾಲಾ ನಿವೃತ್ತ ಶಿಕ್ಷಕ ಕೆ.ಎನ್.ಸೀತಾರಾಮ ಹೆಗ್ಡೆ, ಸಜಿಪ ಮೂಡ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ.ವೆಂಕಟ್ರಮಣ ಭಟ್ , ಶಿಕ್ಷಣ ಸಂಯೋಜಕರಾದ ಚಂದು ನಾಯ್ಕ್ ಅವರನ್ನು ಶೇಷಶಯನ ಕಾರಿಂಜ ಸನ್ಮಾನಿಸಿದರು. ಜಿ.ಪಂ. ಮಾಜಿ ಅಧ್ಯಕ್ಷ ಸದಾನಂದ ಪೂಂಜ , ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬ್ರಾಸಿತ್ತಾಯ , ಹರಿಪ್ರಸಾದ್ ಶೆಟ್ಟಿ ನಗ್ರಿಗುತ್ತು, ಸಂಘದ ಅಧ್ಯಕ್ಷ ಶ್ರೀನಾಥ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಪೂಜಾರಿ, ಪಂಚಾಯಿತಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ ನೀಲ್ಯ, ಅಬ್ದುಲ್ ಕರೀಂ, ಅಬೂಬಕ್ಕರ್ ಇದ್ದರು. ಸ್ಥಾಪಕಾಧ್ಯಕ್ಷ ಬಿ.ಸದಾನಂದ ಪೂಂಜ ಸ್ವಾಗತಿಸಿದರು. ದೇವಿಪ್ರಸಾದ್ ಪೂಂಜ ವಂದಿಸಿದರು. ರಾಮಚಂದ್ರ ರಾವ್ ನಿರೂಪಿಸಿದರು.