ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉರುವಾಲು ದೇವಳದಲ್ಲಿ ಕಳವು

Mainashree
Updated On : 18 Oct 2013, 11:20 am

ಉಪ್ಪಿನಂಗಡಿ: ದುರ್ಗಾದೇವಿಯ ಬೆಳ್ಳಿಯ ಮುಖವಾಡದ ಸಹಿತ ಲಕ್ಷಕ್ಕೂ ಮಿಗಿಲಾದ ನಗ ನಗದು ಕಳವಾದ ಘಟನೆ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆದಿದೆ.
 ಮುಂಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ದೇವಾಲಯದೊಳಗಿರುವ ದುರ್ಗಾದೇವಿಯ ಗುಡಿಯೊಳಕ್ಕೆ ನುಗ್ಗಿ ಶ್ರೀ ದುರ್ಗಾ ದೇವಿಯ ಒಂದುಕಾಲು ಕೆ.ಜಿ. ತೂಕದ ಬೆಳ್ಳಿಯ ಮುಖವಾಡ ಕದ್ದೊಯ್ದಿದ್ದಾರೆ. ದೇವಳದೊಳಗಿದ್ದ ಕಾಣಿಕೆ ಡಬ್ಬಿಗಳನ್ನು ದೇವಾಲಯದ ಹೊರಾಂಗಣಕ್ಕೆ ಕೊಂಡೊಯ್ದು ಕಾಣಿಕೆ ಡಬ್ಬಿಯ ಬೀಗವನ್ನು ಒಡೆದಿದ್ದು ಹಣ ಕಳವು ಮಾಡಲಾಗಿದೆ.
 ಕಳ್ಳರು ದೇವಾಲಯದ ಕಚೇರಿಯೊಳಗಿನ ಕ್ಯಾಶ್ ಬಾಕ್ಸ್ ತೆರೆದು ಅದರಲಿರುವ ಹಣ ಕದ್ದೊಯ್ಯಲು ಯತ್ನಿಸಿದ್ದು, ದೇಗುಲದ ಬಹುತೇಕ ನಗ, ನಗದು ತಿಜೋರಿಯಲ್ಲಿರಿಸಿದ ಕಾರಣ ದೇಗುಲದ ಹೆಚ್ಚಿನ ಆಭರಣ ಕಳ್ಳತನಕ್ಕೆ ಸಿಲುಕುವುದು ತಪ್ಪಿದೆ.
 ದೇಗುಲದ ಮುಖ್ಯ ಅರ್ಚಕ ಗುರುವಾರದಂದು ಪೂಜೆ ಸಲ್ಲಿಸುವ ಸಲುವಾಗಿ ದೇಗುಲಕ್ಕೆ ಬಂದಾಗಲೇ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ದೇವಾಲಯದ ಆಡಳಿತ ಮುಖ್ಯಸ್ಥ ದಿನಕರ ಪೂಜಾರಿ ಕಡ್ತಿಲ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ಅಧಿಕಾರಿಗಳು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement