ಸುದ್ದಿ ಸಂಕ್ಷೇಪ
ಮಂಡ್ಯದಲ್ಲಿ ನ.6ರಿಂದ ಸೇನಾ ನೇಮಕಾತಿ
ಮಂಗಳೂರು: ಕೇಂದ್ರ ಕಾರ್ಯಸ್ಥಾನ ನೇಮಕಾತಿ ವಲಯ, ಬೆಂಗಳೂರು ಇದರ ನೇಮಕಾತಿ ಕಚೇರಿಯಿಂದ ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ನ.6ರಿಂದ 14ರ ವರೆಗೆ ಮುಕ್ತ ನೇಮಕಾತಿ ರ್ಯಾಲಿ ಏರ್ಪಡಿಸಲಾಗಿದೆ. ರಾಜ್ಯದ ಜಿಲ್ಲೆಗಳ ಯುವಕರು ಸೈನಿಕ, ಲಿಪಿಕ/ಸೈನಿಕ, ತಾಂತ್ರಿಕ, ಉಗ್ರಾಣ ಪಾಲಕ ತಾಂತ್ರಿಕ, ಸೈನಿಕ ಸಾಮಾನ್ಯ ಕರ್ತವ್ಯ, ಸೈನಿಕ ಶುಶ್ರೂಷ ಸಹಾಯಕ, ಸೈನಿಕ ಟ್ರೇಡ್ಮೆನ್ಸ್ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಡಿಫೆನ್ಸ್ ಸೆಕ್ಯೂರಿಟಿ ಕಾಪ್ಸ್, ಮಾಜಿ ಸೈನಿಕರು ಪುನರ್ ನೋಂದಣಿ ಮಾಡಬಹುದು. ಹೆಚ್ಚಿನ ವಿವರಕ್ಕೆ ಆರ್ಮಿ ರಿಕ್ರೂಟ್ಮೆಂಟ್ ಕಚೇರಿ ಕೂಳೂರು-0824-2458376ನ್ನು ಸಂಪರ್ಕಿಸಬಹುದು.
ಎರಡು ಯೋಜನೆಗೆ ಒಂದೇ ಅರ್ಜಿ
ಮಂಗಳೂರು: ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅ.22 ಕೊನೆದಿನ. ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಈ ಎರಡೂ ಯೋಜನೆಗಳಿಗೆ ಒಂದೇ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ, ಅರ್ಹತೆ ಇತ್ಯಾದಿ ವಿವರ, ಸರ್ಕಾರಿ ಆದೇಶ ್ಞಛ್ಠಜಠಛಡಡ.್ಛ್ಜ್ಜ.್ಜ್ಟಢ.್ಝಟಿ ವೆಬ್ಸೈಟ್ನಲ್ಲಿ ಲಭ್ಯವಿದೆ. ವಿವರಕ್ಕೆ 0824-2225078 ಸಂಪರ್ಕಿಸಬಹುದು.
ನ.10ರಂದು ಅಹಿಂದ ಅಧಿವೇಶನ
ಮಂಗಳೂರು: ದ.ಕ. ಜಿಲ್ಲಾ ಅಹಿಂದ ಸಂಘಟನೆಯ ವಾರ್ಷಿಕ ಅಧಿವೇಶನ ನ.10ರಂದು ರಾಜ್ಯ ಅಹಿಂದ ಅಧ್ಯಕ್ಷ ಮುಕುಡಪ್ಪರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪೂರ್ವಭಾವಿಯಾಗಿ ಅ.21ರಿಂದ ನ.5ರ ವರೆಗೆ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನ ನಡೆಸಲು ಅಹಿಂದ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ವಾಸುದೇವ ಬೋಳೂರು ಅಧ್ಯಕ್ಷತೆ ವಹಿಸಿದ್ದರು.
ಸಂಶೋಧನಾ ಸಹಾಯಕರಿಗೆ ಆದ್ಯತೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಮಾನವಪ್ರಜ್ಞೆ ಮತ್ತು ಯೋಗವಿಜ್ಞಾನ ವಿಭಾಗಕ್ಕೆ ಯೋಗ ಸಂಶೋಧನಾ ಸಹಾಯಕರು ಬೇಕಾಗಿದ್ದಾರೆ. ಯೋಗ ವಿಜ್ಞಾನ ಅಥವಾ ತತ್ಸಮಾನ ಸ್ನಾತಕೋತ್ತರ ಪದವಿಯಲ್ಲಿ ಶೇ.55ಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು. ಅಭ್ಯರ್ಥಿಗಳು ಅ.30ರೊಳಗೆ ತಲಪುವಂತೆ ಮಾನವಪ್ರಜ್ಞೆ ಮತ್ತು ಯೋಗವಿಜ್ಞಾನ ವಿಭಾಗ, ಮಂಗಳೂರು ವಿವಿ, ಮಂಗಳಗಂಗೋತ್ರಿ-574199 ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ತಿಳಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರು. 10 ಸಾವಿರ ನೀಡಲಾಗುವುದು. ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ಎಂದು ಧರ್ಮನಿಧಿ ಯೋಗ ಪೀಠದ ಸಹಸಂಚಾಲಕರ ಪ್ರಕಟಣೆ ತಿಳಿಸಿದೆ.
ವಾರ್ಷಿಕ ಶಿಬಿರಕ್ಕೆ ಬನ್ನಿ
ಮಂಗಳೂರು: ಕದ್ರಿ ಹಿಲ್ಸ್ನ ಬಾಲಭವನದಲ್ಲಿ 2013-14ನೇ ಸಾಲಿನ 6 ತಿಂಗಳ ವಾರ್ಷಿಕ ಚಟುವಟಿಕೆಗಳನ್ನು ಪ್ರತಿ ಶನಿವಾರ ಮತ್ತು ಭಾನುವಾರದಂದು ಏರ್ಪಡಿಸಲಾಗಿದೆ. ಚಿತ್ರಕಲೆ, ಕರಕುಶಲ ಕಲೆ, ಜೇಡಿ ಮಣ್ಣಿನ ಕಲೆ, ರಂಗ ತರಬೇತಿ, ಸಮೂಹ ನೃತ್ಯ, ಯೋಗ ಮತ್ತು ಕರಾಟೆಯಲ್ಲಿ ಆಸಕ್ತಿ ಇರುವ 8ರಿಂದ 16 ವರ್ಷದೊಳಗಿನ ಮಕ್ಕಳು ಅ.20ರೊಳಗೆ ತಮ್ಮ ಹೆಸರನ್ನು ಬಾಲಭವನದಲ್ಲಿ ನೋಂದಾಯಿಸಬೇಕು. ವಿವರಕ್ಕೆ 08251-2212206/2451254ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
24ರಂದು ಆಗ್ರೋ ಹೌಸ್ ಉದ್ಘಾಟನೆ
ಸುಳ್ಯ: ಸುಳ್ಯದ ಭಾರತ್ ಆಗ್ರೋ ಸರ್ವಿಸಸ್ ಮತ್ತು ಸಪ್ಲೈಸ್ ಮಾಲೀಕ ಪಿ. ರಾಮಚಂದ್ರ ಅವರು ಸುಳ್ಯದ ಶ್ರೀ ಚೆನ್ನಕೇಶವ ದೇವಳದ ಬಳಿ ನೂತನವಾಗಿ ನಿರ್ಮಿಸಿದ ರೈತ ಸ್ನೇಹಿ ಸೇವಾ ಕೇಂದ್ರ ಆಗ್ರೋ ಹೌಸ್ ಅ.24ರಂದು ಉದ್ಘಾಟನೆಗೊಳ್ಳಲಿದೆ. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಮಳಿಗೆ ಉದ್ಘಾಟಿಸಲಿದ್ದು, ನಪಂ ಸದಸ್ಯ ಎನ್.ಎ. ರಾಮಚಂದ್ರ ಅಧ್ಯಕ್ಷತೆ ವಹಿಸುವರು.