23ರವರೆಗೆ ಕಾಶೀ ಮಠಾಧೀಶರ ಮೊಕ್ಕಾಂ
ಮಂಗಳೂರು: ಕಾಶಿಮಠಾಧೀಶ ಶ್ರೀಸುಧೀಂದ್ರ ತೀರ್ಥ ಸ್ವಾಮೀಜಿ ನಗರದ ರಥಬೀದಿಯಲ್ಲಿರುವ ಶ್ರೀವೆಂಕಟ್ರಮಣ ದೇವಸ್ಥಾನದಲ್ಲಿ ಅ.17ರಿಂದ 23ರ ವರೆಗೆ ಮೊಕ್ಕಾಂ ಹೂಡಲಿದ್ದಾರೆ. ಆ ಪ್ರಯುಕ್ತ ದೇವಸ್ಥಾನದ ಆಡಳಿತ ಮಂಡಳಿ ರಕ್ಷೋತ್ರಯ ಹೋಮ, ನವಗ್ರಹ ಹೋಮ ಸಹಿತ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.
20ರಂದು ಸಂಜೆ 6ರಿಂದ ಗಾಯಕ ಶಾಂತೇರಿ ಕಾಮತ್ರಿಂದ ಭಕ್ತಿಗೀತೆ, 21ರಂದು ಸಂಜೆ 6ರಿಂದ ಪುತ್ತೂರು ಪಾಂಡುರಂಗ ನಾಯಕ್ರಿಂದ ಭಕ್ತಿಗೀತೆ, 22ರಂದು ಬೆಂಗಳೂರಿನ ಯುವಕಲಾವಿದ ಕೌಶಿಕ್ ಐತಾಳ್ರಿಂದ ಸಂತವಾಣಿ ನಡೆಯಲಿದೆ.
ಬಳಿಕ ಸಭಾಕಾರ್ಯಕ್ರಮದಲ್ಲಿ ಸುಧೀಂದ್ರತೀರ್ಥ ಶ್ರೀಗಳು ಆಶೀರ್ವಚನ ನೀಡುವರು. ಪ್ರತಿನಿತ್ಯ ಗುರುಸೇವೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಪದ್ಮನಾಭ ಪೈ ತಿಳಿಸಿದ್ದಾರೆ.