ಮಂಗಳೂರು: ಮಹಿಳಾ ಸುರಕ್ಷತೆಗೆ ನಡಿಗೆ
ಮಂಗಳೂರು: ಎಬಿವಿಪಿ ವತಿಯಿಂದ ಮಹಿಳಾ ಸುರಕ್ಷತೆಗಾಗಿ ವಿದ್ಯಾರ್ಥಿನಿಯಿರ ನಡಿಗೆ ರಾಜ್ಯಾದ್ಯಂತ ನಡೆಯಲಿದೆ. ಈ ಅಭಿಯಾನದಲ್ಲಿ ಸಹಿ ಸಂಗ್ರಹ, ಕರಪತ್ರ ವಿತರಣೆ, ಬೀದಿ ನಾಟಕ, ವಿಚಾರ ಸಂಕಿರಣ, ಸುರಕ್ಷತೆಗಾಗಿ ನಡಿಗೆ, ಪ್ರತಿಭಟನೆ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಕಾರ್ಯದರ್ಶಿರಮೇಶ್ ಕೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶಾದ್ಯಂತ ಜಾಗೃತಿ ಅಭಿಯಾನ ನಡೆಯಲಿದ್ದು, ರಾಜ್ಯದಲ್ಲಿ ಅ.23ರಿಂದ ಆರಂಭವಾಗಲಿದೆ. ಪ್ರಮುಖ ಬೇಡಿಕೆಗಳನ್ನು ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದರು.
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಆಗ್ರಹಿಸಿ ಎಬಿವಿಪಿ ಅನೇಕ ಬಾರಿ ಹೋರಾಟ ನಡೆಸಿ ಬಿಸಿ ಮುಟ್ಟಿಸಿದೆ. ವಿಚಾರ ಸಂಕಕಿರಣ ನಡೆಸಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದೆ. ಈ ನಿಲುವಿಗೆ ಎಬಿವಿಪಿ ಈಗಲೂ ಬದ್ಧವಾಗಿದೆ ಎಂದರು. ರಥಬೀದಿ ಸರ್ಕಾರಿ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ಸಾವಿನ ಪ್ರಕರಣ ತನಿಖೆಯನ್ನು ಪೊಲೀಸ್ ಇಲಾಖೆ ಚುರುಕುಗೊಳಿಸಬೇಕು. ಇಲ್ಲವಾದರೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.