ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹಿರಿಯ ನಾಗರಿಕರಿಗೆ ಉಚಿತ ವ್ಯಾಯಾಮ ಶಾಲೆ

Mainashree
Updated On : 19 Oct 2013, 10:38 am

ಮಂಗಳೂರು: ಹಿರಿಯ ನಾಗರಿಕರಿಗೆ ಬೊಕ್ಕಪಟ್ಣದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.20ರಂದು ವ್ಯಾಯಾಮ ಶಾಲೆ ಆರಂಭವಾಗಲಿದೆ.
ಬಡವರಿಗೆ ಉಚಿತವಾಗಿ ವ್ಯಾಯಾಮ, ನಿಯಮಿತ ಉಚಿತ ಆರೋಗ್ಯ ತಪಾಸಣೆ ಮಾಡಲಾಗುವುದು. ದಿನಕ್ಕೆ ಸಾಂಕೇತಿಕವಾಗಿ 1 ನೀಡಿ ವ್ಯಾಯಾಮ ಮಾಡಬಹುದು. ಸ್ಫೂರ್ತಿ ಸಂಸ್ಥೆಯಿಂದ ಕಡಿಮೆ ಬೆಲೆಗೆ ಔಷಧ ಕೂಡಾ ನೀಡಲಾಗುವುದು ಎಂದು ವೈದ್ಯೆ ಡಾ.ಪ್ರಭಾ ಅಧಿಕಾರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರ ಸಂಸ್ಥೆ ಚೈತನ್ಯದಲ್ಲಿ 550 ಸದಸ್ಯರಿದ್ದಾರೆ. ನಿರಂತರ 12 ವರ್ಷ ವ್ಯಾಯಾಮ ಮಾಡಿ ಉತ್ಸಾಹ ಚಿಲುಮೆಗಳಾಗಿದ್ದಾರೆ. ಕೊಡಿಯಾಲಬೈಲ್‌ನಲ್ಲಿ ಶಕ್ತಿನಗರ ಡೊಮಿನಿಕ್ ಚರ್ಚ್‌ನಲ್ಲಿ ಹಿರಿಯ ನಾಗರಿಕರಿಗೆ ವ್ಯಾಯಾಮ ಶಾಲೆ ತೆರೆಯಲಾಗಿದೆ. ರಕ್ತದೊತ್ತಡ, ನೆನಪು ಶಕ್ತಿ, ಡಯಾಬಿಟಿಕ್ ಪರೀಕ್ಷೆಗಳನ್ನು ಪ್ರತಿ ತಿಂಗಳು ನಡೆಸಲಾಗುವುದು.
ದೇಶದಲ್ಲಿ 10 ಕೋಟಿ ಹಿರಿಯ ನಾಗರಿಕರಿದ್ದಾರೆ. 4 ಕೋಟಿ ಹಿರಿಯರಿಗೆ ದೃಷ್ಟಿ ದೋಷ, 2 ಕೋಟಿ ಹಿರಿಯರಿಗೆ ಶ್ರವಣ ದೋಷ, 3.3 ಕೋಟಿ ಮಂದಿಗೆ ಗಂಟುನೋವು, 37 ಲಕ್ಷ ಮಂದಿಗೆ ಬುದ್ಧಿ ಭ್ರಮಣೆ, 1 ಕೋಟಿ ಹಿರಿಯರು ಮೂಳೆ ಮುರಿತ, 3.3 ಹಿರಿಯರು ಕೋಟಿ ಕರುಳಿನ ತೊಂದರೆ, 2 ಕೋಟಿ ಮಂದಿ ಮೂತ್ರ ನಿಯಂತ್ರಣಕ್ಕಾಗಿ ಒದ್ದಾಡುತ್ತಾರೆ. ಮೂರರಲ್ಲಿ ಒಬ್ಬರಿಗೆ ರಕ್ತದೊತ್ತಡ, ಐವರಲ್ಲಿ ಒಬ್ಬರಿಗೆ ಮಧುಮೇಹ, ನಾಲ್ವರಲ್ಲಿ ಒಬ್ಬರಿಗೆ ಖಿನ್ನತೆ ಬಾಧಿಸುತ್ತಿದೆ. ಕ್ಯಾನ್ಸರ್ ರೋಗ ಹಿರಿಯರಲ್ಲಿ 10 ಪಟ್ಟು ಹೆಚ್ಚು. ಪಕ್ಷವಾತದಿಂದ ನರಳುವ ಹಿರಿಯರು 16 ಲಕ್ಷ ಎಂದು ವಿವರ ನೀಡಿದರು.
ಶಿಬಿರವನ್ನು ಆರೋಗ್ಯ ಸಚಿವ ಯು.ಟಿ.ಖಾದರ್  ಉದ್ಘಾಟಿಸುವರು. ಕೆಎಂಸಿ ಪ್ರಭಾರ ಡೀನ್ ಡಾ.ಊರ್ಮಿಳಾ ಖಾಡಿಲ್ಕರ್,ಡಾ.ಅನಸೂಯ ಸಾಲ್ಯಾನ್, ಡಾ.ಮೋಹಿನಿ ಭಟ್, ಡಾ.ಸಿ.ವಿ.ರಘುವೀರ್, ಕುಮುದಾ ಭಾಗವಹಿಸುವರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement