ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗಳೂರು ಆಕಾಶವಾಣಿಗೆ ರಾಷ್ಟ್ರೀಯ ಪ್ರಶಸ್ತಿ

Mainashree
Updated On : 20 Oct 2013, 11:21 am

ಮಂಗಳೂರು: ಅಖಿಲ ಭಾರತ ಆಕಾಶವಾಣಿ ವಾರ್ಷಿಕ ಸ್ಪರ್ಧೆ-2012ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರದ ಹಿರಿಯ ಶ್ರೇಣಿ ಉದ್ಘೋಷಕರಾಗಿದ್ದ ಮುದ್ದು ಮೂಡುಬೆಳ್ಳೆ ರಚಿಸಿ ನಿರೂಪಿಸಿ ನಿರ್ಮಿಸಿದ 'ಪದ ಪಾರ್ದನ ಪಣ್ಪನಾ' ತುಳು ಸಾಕ್ಷ್ಯರೂಪಕ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ರೂಪಕದಲ್ಲಿ ಕೃಷಿ ವಿವರ, ವಿನೋದ, ಹಳ್ಳಿ ಹೆಣ್ಣಿನ ಚೆಲುವು, ಸುಖದುಃಖ, ಕೃಷಿ ಸಲಕರಣೆಗಳು, ಪ್ರಾಣಿ ಪಕ್ಷಿ ವಿವರಗಳೊಂದಿಗೆ ಆಯಾಸ ಮರೆಸಲು ಹಾಡುಗಳನ್ನು ಅಳವಡಿಸಲಾಗಿದೆ. ಈ ಆಶುಕವಿತೆಗಳಲ್ಲಿ ಐಕ್ಯತಾ ಭಾವ, ಭೂಮಿಯ ಮೇಲಿನ ಭಕ್ತಿ, ಸಾಂಸ್ಕೃತಿಕ ಕಲೆಗಳು, ಐತಿಹಾಸಿಕ ಅಂಶಗಳು, ಧಾರ್ಮಿಕತೆ ಮತ್ತು ಜೀವನಶ್ರದ್ಧೆ ಅಂತರ್ಗತವಾಗಿದೆ. 2009ರಲ್ಲಿ ರಾಜ್ಯ ಮಟ್ಟದ ಬಾನುಲಿ ಸ್ಪರ್ಧೆಯಲ್ಲಿ ನಾಟಕ ನಿರ್ಮಾಣಕ್ಕೆ ಇವರಿಗೆ ಪ್ರಥಮ ಪ್ರಶಸ್ತಿ ಲಭಿಸಿತ್ತು ಎಂದು ಕಾರ್ಯಕ್ರಮ ಮುಖ್ಯಸ್ಥ ಡಾ.ವಸಂತ ಕುಮಾರ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement