ಸೌಜನ್ಯಾಳ ಮನೆಗೆ ಪೇಜಾವರಶ್ರೀ ಭೇಟಿ
ಬೆಳ್ತಂಗಡಿ: ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಸೌಜನ್ಯಾಳ ಮನೆಗೆ ಶನಿವಾರ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು. ಸೌಜನ್ಯಾಳ ತಂದೆ ಚಂದಪ್ಪಗೌಡ ಅವರು ಶ್ರೀಗಳೊಂದಿಗೆ ಮಾತನಾಡಿ, ನಮ್ಮ ನ್ಯಾಯಕ್ಕಾಗಿನ ಹೋರಾಟಕ್ಕೆ ಬೆಂಬಲವನ್ನು ವಿನಂತಿಸಿದರು. ಬಂಧಿತ ಆರೋಪಿಯ ಬಗ್ಗೆ ಸಂಶಯವಿದ್ದಲ್ಲಿ ಸಿಬಿಐಗೆ ಒತ್ತಾಯಿಸಿ. ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ, ಸತ್ಯಾಸತ್ಯ ಹೊರಗೆ ಬರುವ ತನಕ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಮತ್ತು ಡಾ. ಹೆಗ್ಗಡೆ ಅವರ ಕುರಿತು ಆರೋಪಗಳು ಬೇಡ ಎಂದರು. ಈ ಸಂದರ್ಭದಲ್ಲಿ ಸೌಜನ್ಯಾಳ ತಾಯಿ ಕುಸುಮಾವತಿ, ಅಜ್ಜ ಬಾಬು ಗೌಡ, ಮಾವ ವಿಠಲ ಮತ್ತು ಮನೆಯವರು ಇದ್ದರು