ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆಧಾರ್ 2ನೇ ಹಂತ ಪ್ರಗತಿ

Mainashree
Updated On : 21 Oct 2013, 10:14 am

ಮಂಗಳೂರು: ದ.ಕ.ಜಿಲ್ಲೆಯ ಸುಳ್ಯ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ 18 ಆಧಾರ್ ಕೇಂದ್ರಗಳಲ್ಲಿ ದ್ವಿತೀಯ ಹಂತದ ಆಧಾರ್ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು, ಸಾರ್ವಜನಿಕರು ಯಾವುದೇ ಶುಲ್ಕ ನೀಡದೆ ಹೆಸರು ನೋಂದಣಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ನೋಂದಣಿ ಮಾಡಿಸಿದವರಿಗೆ ಆಧಾರ್ ಗುರುತಿನ ಚೀಟಿ ಅಂಚೆ ಮುಖೇನ ಬರಲಿದೆ. ಅಂಥವರು ಪುನಃ ನೋಂದಣಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ ಎಂದಿದ್ದಾರೆ.
ಆಧಾರ್ ನೋಂದಣಿ ಕೇಂದ್ರಗಳು-ಮಂಗಳೂರು ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣ ಲಾಲ್‌ಬಾಗ್, ಪಾಲಿಕೆ ವಾಣಿಜ್ಯ ಸಂಕೀರ್ಣ ಕದ್ರಿ ಮಲ್ಲಿಕಟ್ಟೆ, ಸಮುದಾಯ ಭವನ ಪೆರ್ಮನ್ನೂರು, ಸಮುದಾಯ ಭವನ ಉಳ್ಳಾಲ, ಕಾರ್ನಾಡ್ ಸದಾಶಿವ ರಾವ್ ಸ್ಮಾರಕ ಕಟ್ಟಡ ಲೈಟ್‌ಹೌಸ್ ಹಿಲ್ ರಸ್ತೆ, ಪಾಲಿಕೆ ಉಪಕಚೇರಿ ಸುರತ್ಕಲ್, ಐಬಿ ನಾಡ ಕಚೇರಿ ಮೂಡುಬಿದಿರೆ, ಚಿಲಿಂಬಿ ಮಂಗಳೂರು, ಹಳೆ ತಾ.ಪಂ ಕಚೇರಿ ಬಂಟ್ವಾಳ, ಸಮುದಾಯ ಭವನ ಪುತ್ತೂರು, ಪಂಚಾಯ್ತಿ ಕಚೇರಿ ವಿಟ್ಲ, ಗ್ರಾಮ ಪಂಚಾಯ್ತಿ ಕಚೇರಿ ಉಪ್ಪಿನಂಗಡಿ, ನಗರ ಪಂಚಾಯ್ತಿ ಕಚೇರಿ ಬೆಳ್ತಂಗಡಿ, ಗ್ರಾಮ ಪಂಚಾಯ್ತಿ ಕಚೇರಿ ಧರ್ಮಸ್ಥಳ, ಕಪಿತಾನಿಯೋ ಪಂಪ್‌ವೆಲ್, ರೊಜಾರಿಯೊ ಶಾಲೆ ಬೆಂಗ್ರೆ ಕಸಬಾ, ನಗರ ಪಂಚಾಯ್ತಿ ಮೂಲ್ಕಿ ಕೇಂದ್ರಗಳಲ್ಲಿ ಆಧಾರ್ ನೋಂದಾಯಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement