ಕರಾಮುವಿ ಪ್ರವೇಶ ಅವಧಿ ವಿಸ್ತರಣೆ
ಮಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕರಾಮುವಿ)2013-14ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಅವಧಿ ವಿಸ್ತರಿಸಲಾಗಿದೆ.
ದಂಡ ಶುಲ್ಕವಿಲ್ಲದೆ ಪ್ರವೇಶಕ್ಕೆ ಅಂತಿಮ ದಿನ-ಅ.23-ಪ್ರಥಮ ಬಿಎ/ಬಿಕಾಂ, 26ರಂದು ದ್ವಿತೀಯ ಬಿಎ/ಬಿಕಾಂ, 29ರಂದು ಪ್ರಥಮ ಎಂಎ/ಎಂಕಾಂ, 25ರಂದು ಪ್ರಥಮ ಎಂಎಸ್ಸಿ, 21ರಂದು ಡಿಪ್ಲೊಮಾ. ರು. 200 ದಂಡ ಶುಲ್ಕ ಸಹಿತ ಪ್ರವೇಶಾತಿಗೆ ಅಂತಿಮ ದಿನಾಂಕ-ನ.11ರಂದು ಪ್ರಥಮ ಬಿಎ/ಬಿಕಾಂ, ನ.21ರಂದು ದ್ವಿತೀಯ ಬಿಎ/ಬಿಕಾಂ, ಅ.25ರಂದು ತೃತೀಯ ಬಿಎ/ಬಿಕಾಂ, ನ.19ರಂದು ಪ್ರಥಮ ಎಂಎ/ಎಂಕಾಂ, ಅ.30ರಂದು ಅಂತಿಮ ಎಂಎ/ಎಂಕಾಂ, ನ.12ರಂದು ಪ್ರಥಮ ಎಂಎಸ್ಸಿ, ನ.15ರಂದು ಡಿಪ್ಲೊಮಾಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.