ಸಂಘ ಸಂಸ್ಥೆಗಳಿಗೆ ಕಸಾಪ ಮನವಿ
ಮಂಗಳೂರು: ನ.1ರಂದು ರಾಜ್ಯೋತ್ಸವ ಸಲುವಾಗಿ ಬೆಳಗ್ಗೆ 7.30ರಿಂದ ನಗರದ ಬಲ್ಮಠದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನ ವರೆಗೆ ಭುವನೇಶ್ವರಿ ಮೆರವಣಿಗೆ ನಡೆಯಲಿದೆ. ಹಿರಿಯ ಸಾಹಿತಿಗಳು, ಪ್ರಮುಖರ ಉಪಸ್ಥಿತಿಯಲ್ಲಿ ಮೆರವಣಿಗೆ ಡಾ.ಶಿವರಾಮ ಕಾರಂತ ಮಾರ್ಗವಾಗಿ ಸಾಗಲಿದೆ. ಇದರಲ್ಲಿ ಜಿಲ್ಲೆಯ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ತಂಡಗಳು ಭಾಗವಹಿಸವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನಂತಿಸಿದೆ.
ಎಲ್ಲ ಕನ್ನಡ ಪರ ಸಂಘಟನೆಗಳು, ಸಂಘಸಂಸ್ಥೆಗಳು, ಭಾಗವಹಿಸಬಹುದು. ನಾಡು ನುಡಿ ಪ್ರತಿಬಿಂಬಿಸುವ ವೇಷಧಾರಿ ತಂಡ, ದಫ್, ತಾಲೀಮು, ಕೋಲಾಟ, ಗೊಂಬೆ ಕುಣಿತ ಇತ್ಯಾದಿ ತಂಡಗಳು ಬೆಳಗ್ಗೆ 7ಕ್ಕೆ ಅಂಬೇಡ್ಕರ್ ವೃತ್ತ ಬಳಿ ಸಮಾವೇಶಗೊಳ್ಳಬೇಕು. ವಿವರಕ್ಕೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣಾ ಕಾಂಪ್ಲೆಕ್ಸ್, ಮಹಾತ್ಮಾಗಾಂಧಿ ರಸ್ತೆ, ಕೊಡಿಯಾಲಬೈಲ್, ಮಂಗಳೂರು ಇಲ್ಲಿ ಸಂಪರ್ಕಿಸಬಹುದು ಎಂದು ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ(9845083736)ಪ್ರಕಟಣೆಯಲ್ಲಿ ತಿಳಿಸಿದ್ದಾರೆ.