ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಜ್ಜಿಯ ಬೈಗುಳಕ್ಕೆ ನೊಂದ ಬಾಲಕಿ ಬೆಂಕಿ ಹಚ್ಚಿ ಆತ್ಮಹತ್ಯೆ

Rashmi Kasaragodu
Updated On : 22 Oct 2013, 11:17 am

ಕಾರ್ಕಳ: ಇಲ್ಲಿನ ಬೆಳ್ಮಣ್ಣು ಗ್ರಾಮದಲ್ಲಿ ಅಜ್ಜಿ ಬೈದಿದ್ದಕ್ಕೆ ನೊಂದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡದಿದೆ. ಮೃತ ಸುಜಯ (12) ಬೆಳ್ಮಣ್ಣು ಚರ್ಚ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ. ಈಕೆ ಅಜ್ಜಿ ಕುಸುಮಾ ಎಂಬವರೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದಳು.
ಸೋಮವಾರ ಬೆಳಿಗ್ಗೆ ಅಜ್ಜಿ ಕುಸುಮಾ ಮನೆಯಿಂದ ಹೊರಗೆ ಹೋಗಿದ್ದರು. ಹಿಂದಕ್ಕೆ ಬಂದಾಗ, ಮನೆಯಲ್ಲಿದ್ದ ಸುಜಯ, ಯಾರೋ ಹುಡುಗನೊಂದಿಗೆ ಗುಡಿಸಲಿನಲ್ಲಿ ಕುಳಿತು ಮಾತನಾಡುತ್ತಿದ್ದುದನ್ನು ಕಂಡು ಆಕ್ಷೇಪಿಸಿದರು. ಇದರಿಂದ ನೊಂದ ಸುಜಯ ಗುಡಿಸಲೊಳಗಿಂದ ಸೀಮೆಎಣ್ಣೆ ಡಬ್ಬವನ್ನು ತಂದು ಗುಡಿಸಲಿನ ಹೊರಗೆ ಮೈಮೇಲೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಜ್ಜಿ ಮತ್ತು ಅಕ್ಕಪಕ್ಕದವರು ಆರಿಸುವ ಪ್ರಯತ್ನ ಮಾಡಿದರು ಪ್ರಯೋಜನವಾಗಿಲ್ಲ.
 ಸುಜಯ ಚಿಕ್ಕವಳಿರುವಾಗಲೇ ತಂದೆ ತೀರಿ ಹೋಗಿದ್ದಾರೆ, ನಂತರ ತಾಯಿ ಕೂಡ ಬೇರೆಯವರೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಈಕೆಯ ಹಿರಿಯ ಸಹೋದರಿಯೊಬ್ಬಳು ಕಳೆದ ವರ್ಷ ಅನಾರೋಗ್ಯದಿಂದ ತೀರಿ ಹೋಗಿದ್ದಾಳೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement